ಪ್ರಪಂಚದ ಎಲ್ಲ ದೇಶಗಳಲ್ಲೂ ರಾಜಕಾರಣ ಎಂಬುದು ಅಕ್ಷರಶಃ ರಣರಂಗದಂತೆ ಪರಿವರ್ತಿತಗೊಳ್ಳುತ್ತಿದೆ.
ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದವರು ತಮ್ಮ ವಿರುದ್ದ ಯಾರೂ ಏನನ್ನೂ ಮಾತನಾಡುವಂತಿಲ್ಲ ಎಂಬಂತೆ ವರ್ತಿಸುತ್ತಾರೆ. ಸ್ಪರ್ಧಾತ್ಮಕವಾಗಿ ಸ್ವೀಕರಿಸುವ ಮನೋಭಾವವೇ ಇಲ್ಲವಾಗಿದೆ. ದ್ವೇಷದ ಮನಃಸ್ಥಿತಿಯಲ್ಲೇ ಕಾಣುವ ದುಸ್ಥಿತಿ ಬಂದೊದಗಿದೆ.
ಇಂತಹುದೇ ಘಟನೆ ತೈವಾನ್ ಸಂಸತ್ತಿನಲ್ಲಿ ನಡೆದಿದೆ. ಸದಸ್ಯರೊಬ್ಬರ ನಾಮನಿರ್ದೇಶನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಡೆಮಾಕ್ರೆಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ (ಡಿಪಿಪಿ) ಹಾಗೂ ಕೆಎಂಟಿ ಸದಸ್ಯರ ನಡುವೆ ಜಟಾಪಟಿ ಸಂಭವಿಸಿದ್ದು, ಸದಸ್ಯರು ಪರಸ್ಪರ ನೀರಿನ ಬಾಟಲಿ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ಪರಸ್ಪರ ಎಸೆದಾಡಿಕೊಂಡಿದ್ದಾರೆ. ಕುಸ್ತಿ ಅಖಾಡದಲ್ಲಿನ ಪೈಲ್ವಾನರಂತೆ ಪಂಚಿಂಗ್ ಪಟ್ಟುಗಳನ್ನು ಹಾಕಿದ್ದಾರೆ.