alex Certify ಪಾರ್ಟಿ ಮಾಡಬೇಕು ಅಂತಾ ಮದುವೆಯಾದ ಬಾಲಕರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರ್ಟಿ ಮಾಡಬೇಕು ಅಂತಾ ಮದುವೆಯಾದ ಬಾಲಕರು..!

ಹೈಸ್ಕೂಲ್​ ಪಾರ್ಟಿ ನಡೆಸಬೇಕು ಅಂತಾ ಇಬ್ಬರು ಶಾಲೆ ಮಕ್ಕಳು ಮದುವೆ ನಾಟಕವಾಡಿದ ವಿಚಿತ್ರ ಘಟನೆ ಸಿಡ್ನಿಯಲ್ಲಿ ನಡೆದಿದೆ. ಕೊರೊನಾದಿಂದ ರದ್ದಾಗಿದ್ದ ಪಾರ್ಟಿ ನಡೆಸಬೇಕು ಅಂತಾ ಶಾಲಾ ಮಕ್ಕಳು ಈ ನಾಟಕ ಮಾಡಿದ್ದಾರೆ.

ಪ್ರೌಢಶಾಲಾ ಮಕ್ಕಳು ತಮ್ಮ ಸಹಪಾಠಿಗಳ ಜೊತೆ ಪಾರ್ಟಿ ಏರ್ಪಡಿಸಿದ್ದರು. ಆದರೆ ಪಾರ್ಟಿಗೆ 100 ಮಂದಿಗೆ ಆಹ್ವಾನ ಕೊಡೋದು ಕೊರೊನಾ ಮಾರ್ಗಸೂಚಿಯಿಂದಾಗಿ ಸಾಧ್ಯವಿರಲಿಲ್ಲ.

ಆಸ್ಟ್ರೇಲಿಯಾದಲ್ಲಿರುವ ಮಾರ್ಗಸೂಚಿ ಪ್ರಕಾರ 20 ರಿಂದ 30 ಮಂದಿಗಷ್ಟೇ ಆಹ್ವಾನ ನೀಡಲು ಅವಕಾಶವಿತ್ತು. ಆದರೆ ಮದುವೆ ಸಮಾರಂಭಕ್ಕೆ 150 ಮಂದಿ ಭಾಗವಹಿಸಲು ಅವಕಾಶವಿದೆ ಎಂಬುದನ್ನ ತಿಳಿದುಕೊಂಡ ಇಬ್ಬರು ಗಂಡು ಮಕ್ಕಳು ಈ ಮದುವೆ ನಾಟಕ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಕ್ಕಳು ಮದುವೆಯಾದ ಫೋಟೋಗಳನ್ನ ಕಂಡ ಪೋಷಕರು ಹೌಹಾರಿದ್ದಾರೆ.  ಕೂಡಲೇ ಸ್ಥಳಕ್ಕಾಗಮಿಸಿದ ಪೋಷಕರು ಶಾಕ್​ ಆಗಿದ್ದಾರೆ. ಇದರಲ್ಲಿ ಒಬ್ಬ ಹುಡುಗನ ತಂದೆ ಇದು ಮಕ್ಕಳಾಟವಾಗಿದ್ದು ಈ ಮದುವೆಯನ್ನ ಮಾನ್ಯ ಎಂದು ಪರಿಗಣಿಸೋಕೆ ಸಾಧ್ಯವಿಲ್ಲ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...