ಅಮೆರಿಕದ ಡೆಲ್ವಾರ್‌ನ ಈಜುಗಾರನೊಬ್ಬ ಎಂಟು ಅಡಿ ಉದ್ದದ ಶಾರ್ಕ್ ಒಂದನ್ನು ಹಿಡಿದಿದ್ದಲ್ಲದೇ, ತನ್ನ ಬರಿಗೈಗಳಿಂದ ಅದರ ಮೂತಿಯನ್ನು ತೆರೆದು ಎಲ್ಲರಿಗೂ ತೋರಿದ್ದಾನೆ.
ಅಲೆಗಳ ನಡುವೆ ಶಾರ್ಕ್ ಅನ್ನು ಬರಿಗೈಗಳಿಂದ ಎಳೆದು, ಅದರ ಮೂತಿಯನ್ನು ಐದು ಸೆಕೆಂಡ್‌ಗಳ ಮಟ್ಟಿಗೆ ತೆರೆದೇ ಇಟ್ಟುಕೊಂಡಿದ್ದಾನೆ. ಶಾರ್ಕ್ ಮೂತಿಗೆ ಸಿಲುಕಿಕೊಂಡಿದ್ದ ಹುಕ್ ಒಂದನ್ನು ತೆರೆಯಲು ಈತ ಹೀಗೆ ಮಾಡಿದ್ದು, ಇಂಥದ್ದಕ್ಕೆಲ್ಲಾ ವೃತ್ತಿಪರ ತರಬೇತಿ ಪಡೆದುಕೊಂಡಿದ್ದಾನೆ ಎಂದು ಫಾಕ್ಸ್5 ಸುದ್ದಿ ವಾಹಿನಿ ತಿಳಿಸಿದೆ.
ಈ ಪ್ರದೇಶದಲ್ಲಿ ಶಾರ್ಕ್‌ಗಳನ್ನು ಹಿಡಿಯುವುದು ಕಾನೂನು ಬಾಹಿರವಾಗಿದ್ದು, ಯಾರಾದರೂ ಶಾರ್ಕ್ ಅನ್ನು ಅಪ್ಪಿತಪ್ಪಿ ಹಿಡಿದರೂ ಕೂಡಲೇ ಅದನ್ನು ಅಲ್ಲೇ ಬಿಟ್ಟುಬಿಡಬೇಕು.