ಯುರೋಪ್ ರಾಷ್ಟ್ರಗಳಲ್ಲಿ ಮೊದಲ ಹಂತದಲ್ಲಿ ಲಾಕ್ ಡೌನ್ ಜಾರಿಯಾದ ಸಂದರ್ಭದಲ್ಲಿ ಚಿಂತೆಗೀಡಾದ ಪ್ರಜೆಗಳು ಅವಶ್ಯ ವಸ್ತುಗಳ ಜೊತೆ ಜೊತೆಗೆ ರಾಶಿಗಟ್ಟಲೇ ಟಾಯ್ಲೆಟ್ ಪೇಪರ್ಗಳನ್ನ ಹೊತ್ತೊಯ್ದ ಫೋಟೋಗಳು ವೈರಲ್ ಆಗಿದ್ದವು.
ಇದೀಗ ಎರಡನೇ ಬಾರಿಗೆ ಯುರೋಪ್ ರಾಷ್ಟ್ರಗಳಲ್ಲಿ ಲಾಕ್ಡೌನ್ ಜಾರಿಯಾಗಿದ್ದು ಮತ್ತೊಮ್ಮೆ ಸಾರ್ವಜನಿಕರು ಕಂಗಾಲಾಗಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಚಿಂತೆಗೀಡಾಗಿದ್ದ ಯುರೋಪ್ ಪ್ರಜೆಗಳು ಲಾಕ್ಡೌನ್ ತೆರವಿನ ಬಳಿಕ ಸಾಮಾನ್ಯ ಜೀವನ ಸಾಗಿಸುತ್ತಿದ್ದರು. ಇನ್ನೇನು ಜೀವನ ಸಹಜ ಸ್ಥಿತಿಗೆ ಬಂತು ಅನ್ನೋವಷ್ಟರಲ್ಲಿ ಯುರೋಪ್ನಲ್ಲಿ ಕರೊನಾದ 2ನೇ ಹಂತದ ಅಲೆ ಶುರುವಾಗಿದೆ.
ಹೀಗಾಗಿ ಯುಕೆ ಸೇರಿದಂತೆ ಇತರೆ ಯುರೋಪ್ ರಾಷ್ಟ್ರಗಳಲ್ಲಿ ಲಾಕ್ಡೌನ್ 2.0 ಜಾರಿಯಾಗಿದೆ. ಮತ್ತೆ ಮೊದಲಿನಂತೆ ಆತಂಕಕ್ಕೊಳಗಾದ ಜನತೆ ಅಗತ್ಯ ವಸ್ತುಗಳ ಜೊತೆ ಲೋಡ್ಗಟ್ಟಲೇ ಟಾಯ್ಲೆಟ್ ಪೇಪರ್ಗಳನ್ನ ಸೂಪರ್ ಮಾರ್ಕೆಟ್ನಿಂದ ಮನೆಗೆ ಹೊತ್ತೊಯ್ಯುತ್ತಿದ್ದಾರೆ. ಇಂಗ್ಲೆಂಡ್ನ ಹಲವೆಡೆ ಈ ದೃಶ್ಯಗಳು ಕಂಡುಬಂದಿವೆ.
ಇಂಗ್ಲೆಡ್ ಪ್ರಧಾನಿ ಬೋರಿಸ್ ಜಾನ್ಸನ್ ಡಿಸೆಂಬರ್ 2ರವರೆಗೆ ಲಾಕ್ಡೌನ್ 2.0 ವನ್ನ ಜಾರಿ ಮಾಡಿದ್ದಾರೆ. ಕರೊನಾದಿಂದಾಗಿ ದೇಶದಲ್ಲಿ 85000 ಕ್ಕೂ ಅಧಿಕ ಸಾವಾಗುವ ಸಾಧ್ಯತೆ ಇರೋದ್ರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.