ಜರ್ಮನಿಯಲ್ಲಿ ಪ್ರಕೃತಿಗೆ ತೆರೆದುಕೊಳ್ಳುವ ಸಲುವಾಗಿ ಪ್ರವಾಸೋದ್ಯಮ ಇದ್ದು, ಇದರಲ್ಲಿ ಸೌರಸ್ನಾನ (ಸನ್ ಬಾತ್) ಕೂಡ ಒಂದು. ಇದಕ್ಕಾಗಿ ಬೆರ್ಲಿನ್ ನಿಂದ ಬಂದಿದ್ದ ವಯಸ್ಕರೊಬ್ಬರು, ಬಟ್ಟೆಯನ್ನೆಲ್ಲ ಕಳಚಿ ಬಯಲಲ್ಲಿ ಮಲಗಿದ್ದರು. ಪಕ್ಕದಲ್ಲಿ ಒಂದಿಷ್ಟು ಪಿಜ್ಜಾ, ಸ್ನ್ಯಾಕ್ಸ್, ಲ್ಯಾಪ್‌ಟಾಪ್ ಎಲ್ಲವನ್ನೂ ಇಟ್ಟುಕೊಂಡು ಸೊಂಪಾಗಿ ಪವಡಿಸಿದ್ದರು.
ಮೊದಲೇ ಬಟಾಬಯಲಿನ ಪರಿಸರ ಎಂದ ಮೇಲೆ ಕೇಳಬೇಕೆ ? ಪ್ರಾಣಿಗಳು ಸ್ವಚ್ಛಂದವಾಗಿ ವಿಹರಿಸುತ್ತಿರುತ್ತವೆ. ಈ ಎಚ್ಚರಿಕೆ ಮರೆತು ಮಲಗಿದ್ದ ವ್ಯಕ್ತಿ ಬಳಿ ಬಂದ ಹಂದಿಗಳ ಗುಂಪೊಂದು, ಅಲ್ಲಿಟ್ಟಿದ್ದ ಪಿಜ್ಜಾ, ಸ್ನ್ಯಾಕ್ಸ್ ಎಲ್ಲವನ್ನೂ ಗಡದ್ದಾಗಿ ತಿಂದು, ಲ್ಯಾಪ್ ಟಾಪ್ ಚೀಲದಲ್ಲಿ ತಿನ್ನಲು ಏನಿದೆ ಎಂದು ಹುಡುಕುತ್ತಿವೆ.
ಅಷ್ಟರಲ್ಲಿ ಎಚ್ಚರಾದ ವ್ಯಕ್ತಿ ತನ್ನ ಸುತ್ತ ಹಂದಿಗಳಿರುವುದನ್ನು ಕಂಡು ಹೆದರೋಡಿಸಲು ಹೊರಟಿದ್ದಾರೆ. ಹೆದರಿದ ಹಂದಿಗಳು ಲ್ಯಾಪ್‌ಟಾಪ್ ಚೀಲದ ಸಮೇತ ಅಲ್ಲಿಂದ ಪೇರಿ ಕಿತ್ತಿವೆ. ತನ್ನ ಲ್ಯಾಪ್‌ಟಾಪ್ ಚೀಲಕ್ಕಾಗಿ ನಗ್ನ ಓಟ ನಡೆಸಿದ ಆತ, ಕೊನೆಗೂ ಹಂದಿಗಳಿಂದ ಲ್ಯಾಪ್ ಟಾಪ್ ಚೀಲ ಕಸಿದು ತರುವಲ್ಲಿ ಯಶಸ್ವಿಯಾಗಿದ್ದಾನೆ. ಅಲ್ಲಿದ್ದ ಎಲ್ಲರೂ ನಗುತ್ತಲೇ ಅವನ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
https://www.facebook.com/alandauer/posts/10207757967503350