ಅಮೆರಿಕದ ಉತ್ತರದ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ 1.30ಕ್ಕೆ ಸೂರ್ಯಾಸ್ತವಾಗಿದೆ. ಅಂದಹಾಗೆ ಇದು 2020ರ ಕೊನೆಯ ಸೂರ್ಯಾಸ್ತವಾಗಿದೆ. ಇನ್ನು 65 ದಿನಗಳ ಬಳಿಕ ಅಂದರೆ ಜನವರಿ 21,2021ರಂದು ಸೂರ್ಯೋದಯವಾಗಲಿದೆ.
ವಿಶೇಷ ಅಂದರೆ ಈ ಭಾಗದ ಜನರು ಬೆಳಕನ್ನ ಕಾಣುವಷ್ಟರ ಹೊತ್ತಿಗೆ ಜೋ ಬಿಡೆನ್ ಅಮೆರಿಕದ ಅಧ್ಯಕ್ಷರಾಗಿರುತ್ತಾರೆ,
ಅಲಾಸ್ಕಾದ ಉಟ್ಕಿಯಾಸ್ವಿಕ್ನಲ್ಲಿ ಧ್ರುವೀಯ ಬೆಳಕು ಅಥವಾ ಪೊಲಾರ್ ಲೈಟ್ ಪ್ರಕ್ರಿಯೆ ಪ್ರತಿವರ್ಷ ಸಂಭವಿಸುತ್ತೆ. ಅಂದಹಾಗೆ ಈ ಪಟ್ಟಣ ಸಿವಿಲ್ ಟ್ವಿಲೈಟ್ ಎಂದು ಕರೆಯಲ್ಪಡುವ ಬೆಳಕನ್ನ ಕೆಲ ಕ್ಷಣದವರೆಗೆ ಕಾಣುತ್ತೆ. ಆದರೆ ಸೂರ್ಯ ಮಾತ್ರ 2 ತಿಂಗಳ ಬಳಿಕವೇ ದರ್ಶನ ನೀಡಲಿದ್ದಾನೆ.
ಸಾಮಾನ್ಯವಾಗಿ ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ನಿಗದಿತ ಸಮಯದವರೆಗೆ ಸೂರ್ಯನ ಬೆಳಕು ಕಾಣಿಸುತ್ತೆ. ಆದರೆ ಈ ಪ್ರದೇಶದಲ್ಲಿ ಮಾತ್ರ ಮತ್ತೊಮ್ಮೆ ಸೂರ್ಯನನ್ನ ನೋಡಬೇಕು ಅಂದರೆ ಇಲ್ಲಿನ ಜನರು 2021ರವರೆಗೆ ಕಾಯಲೇಬೇಕು ಅಂತಾ ಹವಾಮಾನ ತಜ್ಞ ಡೇನಿಯಲ್ ಬ್ಯಾಂಕ್ ಹೇಳಿದ್ದಾರೆ.