ವಿಶ್ವದ ಅತ್ಯಂತ ಪ್ರಧಾನ ಮಾರ್ಗಗಳಲ್ಲಿ ಒಂದಾದ ಈಜಿಪ್ಟ್ ನ ಸುಯೆಜ್ ಕಾಲುವೆಯ ದಡದ ಮರಳಿನಲ್ಲಿ ‘ಎವರ್ ಗಿವೆನ್’ ಎಂಬ ಸರಕು ಸಾಗಣೆ ಹಡಗು ಸಿಲುಕಿಕೊಂಡಿದ್ದ ಕಾರಣ ಕಳೆದ ಒಂದು ವಾರದಿಂದ ಜಲ ಮಾರ್ಗದಲ್ಲಿ ಅತಿ ದೊಡ್ಡ ಟ್ರಾಫಿಕ್ ಜಾಮ್ ಏರ್ಪಟ್ಟಿತ್ತು.
ಸೂಯೆಜ್ ಕಾಲುವೆಯಲ್ಲಿ ಅಡ್ಡಡ್ಡಲಾಗಿ ‘ಎವರ್ ಗಿವೆನ್’ ಹಡಗು ಸಿಲುಕಿಕೊಂಡಿದ್ದ ಕಾರಣ ಸಾವಿರಾರು ಇತರೆ ಹಡಗುಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಇದರಿಂದಾಗಿ ನೂರಾರು ಕೋಟಿ ರೂಪಾಯಿ ನಷ್ಟ ಸಂಭವಿಸುವಂತಾಗಿತ್ತು.
ಈ ವಿಡಿಯೋ ನೋಡಿದ್ರೆ ನೆನಪಿಗೆ ಬರುತ್ವೆ ‘ಆ ದಿನಗಳು’
ಇದೀಗ ‘ಎವರ್ ಗಿವೆನ್’ ಸರಕು ಸಾಗಣೆ ಹಡಗನ್ನು ಮತ್ತೆ ನೀರಿನಲ್ಲಿ ತೇಲುವಂತೆ ಮಾಡುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಜಲಮಾರ್ಗದ ಟ್ರಾಫಿಕ್ ಜಾಮ್ ತೆರವುಗೊಂಡಿದ್ದು, ಎಲ್ಲಾ ಹಡಗುಗಳು ಸಂಚಾರ ಆರಂಭಿಸಿವೆ.