ನಗರ ಜೀವನದಲ್ಲಿ ಟ್ರಾಫಿಕ್ ಜಾಮ್ ಸಹಜ ಸಾಮಾನ್ಯ. ಗಂಟೆಗಟ್ಟಲೆ ರಸ್ತೆಯಲ್ಲಿ ಸಿಲುಕಿಕೊಳ್ಳುವುದು ಸರ್ವೇ ಸಾಮಾನ್ಯ. ಕೆಲವು ಅಪರೂಪದ ಸಂದರ್ಭದಲ್ಲಿ ಹಗಲು- ಇರುಳು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿರುವ ಉದಾಹರಣೆ ಕೆಲವರಿಗೆ ಗೊತ್ತಿರಬಹುದು.
ಆದರೆ, ನಿಮಗೆ ಗೊತ್ತೆ…? ಅತಿ ಉದ್ದದ ಟ್ರಾಫಿಕ್ ಜಾಮ್ ಸಮುದ್ರದಲ್ಲಿ 1967-1975ರವರೆಗೆ ಎಂಟು ವರ್ಷಗಳ ಕಾಲ ನಡೆಯಿತು….!
ಉತ್ತರ ಮೆಡಿಟರೇನಿಯನ್ ಅನ್ನು ದಕ್ಷಿಣದಲ್ಲಿ ಕೆಂಪು ಸಮುದ್ರದೊಂದಿಗೆ ಸಂಪರ್ಕಿಸುವ ಕಿರಿದಾದ ಸೂಯೆಜ್ ಕಾಲುವೆಯಲ್ಲಿ ಹಡಗು ಸಿಲುಕಿಕೊಂಡ ಕಾರಣದಿಂದ ಅತಿ ದೀರ್ಘ ಟ್ರಾಫಿಕ್ ಜಾಮ್ ಉಂಟಾಗಿತ್ತಂತೆ.
ಬೆಚ್ಚಿಬೀಳಿಸುವಂತಿದೆ ಹಾವು ಕಡಿತದಿಂದ ದೇಶದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ…!
ಅಂತರರಾಷ್ಟ್ರೀಯ ವ್ಯಾಪಾರಕ್ಕಾಗಿ ವಿಶ್ವದ ಪ್ರಮುಖ ಮಾರ್ಗಗಳಲ್ಲಿ ಒಂದಾದ ಸೂಯೆಜ್ ಕಾಲುವೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿ, ಸಿಲುಕಿಕೊಂಡು ನಿಂತಿದ್ದ ಹಡಗು ದೀರ್ಘಾವಧಿಗೆ ಪರದಾಡುವಂತಾಗಿತ್ತು ಎಂಬ ಸುದ್ದಿಯೊಂದು ಅಂತರ್ಜಾಲದಲ್ಲಿ ಪ್ರಸ್ತುತ ಚರ್ಚೆಯಲ್ಲಿದೆ. ಹಾಗೆಯೇ ಸುದ್ದಿ ಹಲವು ಹಾಸ್ಯಮಯ ಮೆಮೆ ರಚನೆಗೂ ಕಾರಣವಾಗಿದೆ.