ರೈಲಿನ ಲೋಕೋ ಪೈಲಟ್ ಒಬ್ಬರಿಗೆ ಆಕೆಯ ಪ್ರೇಮಿ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.
ಡಬ್ಲಿನ್ನ ಪಿಯರ್ಸ್ ರೈಲ್ವೇ ನಿಲ್ದಾಣದಲ್ಲಿ ತನ್ನ ಮನದನ್ನೆಗೆ ಕಾಯುತ್ತಿದ್ದ ಕಾನರ್ ಒ’ಸುಲ್ಲಿವನ್ ಹೂಗುಚ್ಛದೊಂದಿಗೆ ’ವಿಲ್ ಯೂ ಮ್ಯಾರಿ ಮಿ’ ಭಿತ್ತಿ ಪತ್ರ ಹಿಡಿದು ಕಾಯುತ್ತಿರುವುದನ್ನು 36 ಸೆಕೆಂಡ್ಗಳ ಈ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ.
ಈ ಕಲಾತ್ಮಕವಾದ ಪ್ರಪೋಸ್ಗೆ ಹುಡುಗಿ ಪೌಲಾ ಕಾರ್ಬೋ ಜೀ ’ಎಸ್’ ಎಂದಿದ್ದು, ಹ್ಯಾಪಿ ಎಂಡಿಂಗ್ನೊಂದಿಗೆ ಕಥೆ ಅಂತ್ಯವಾಗಿದೆ. “ಕ್ರಿಸ್ಮಸ್ ವೇಳೆಯಲ್ಲಿ ಆತ ನನಗೆ ಪ್ರಪೋಸ್ ಮಾಡುತ್ತಾನೆ ಎಂದುಕೊಂಡಿದ್ದೆ. ನನಗೆ ಬಹಳ ಅಚ್ಚರಿಯಾಗಿದೆ” ಎಂದು ಪೌಲಾ ಹೇಳಿದ್ದಾರೆ.