ತನ್ನ ಜೀವಮಾನದ ಶಾಟ್ ಒಂದನ್ನು ಸೆರೆಹಿಡಿದ ಛಾಯಾಗ್ರಾಹಕ ಹೆರ್ನಾಂಡೋ ರಿವೆರಾ ಕರ್ವಾಂಟೆಸ್, ಮೆಕ್ಸಿಕೋದ ಅತ್ಯಂತ ಸಕ್ರಿಯ ಜ್ವಾಲಾಮುಖಿ ಪರ್ವತದ ನೆತ್ತಿ ಮೇಲೆ ಒಮ್ಮೆಲೇ 50 ಸಿಡಿಲುಗಳು ಬಡಿದದ್ದನ್ನು ಸೆರೆ ಹಿಡಿದಿದ್ದಾರೆ.
ಐದು ನಿಮಿಷಗಳ ಒಳಗೆ 50 ಸಿಡಿಲುಗಳು ಬಡಿದ ಕಾರಣ ‘The Night of a Thousand Forks’ ಎಂದು ಈ ದೃಶ್ಯ ಚಿತ್ತಾರವನ್ನು ಕರೆಯಲಾಗಿದೆ. ಭಾರೀ ಮಳೆಯ ನಡುವೆ ಅಪ್ಪಳಿಸಿದ ಈ ಸಿಡಿಲಿನಿಂದಾಗಿ ಇಡಿಯ ಕೊಲಿಮಾ ನಗರ ರಾತ್ರಿಯೆಲ್ಲಾ ಎದ್ದಿರುವ ಹಾಗೆ ಆಗಿದೆ.
ಈ ದೃಶ್ಯ ಸಿರಿಯನ್ನು ಒಂದೇ ಫ್ರೇಮ್‌ನಲ್ಲಿ ತರಲು ಕರ್ವಾಂಟೆಸ್ 42 ಚಿತ್ರಗಳನ್ನು ಒಂದೆಡೆ ಸೇರಿಸಿದ್ದಾರೆ. ಐದು ನಿಮಿಷಗಳ ಒಳಗೆ ಈ ಎಲ್ಲಾ ಸಿಡಿಲುಗಳೂ ಬಡಿದಿವೆ.