ಮಿಯಾಮಿ ಮೂಲದ ಜಿಮ್ನಾಸ್ಟ್ ಕ್ರಿಸ್ಟಿನಾ ಮಕುಶೆಂಕೋ ಅವರು ತಮ್ಮ ಅತ್ಯದ್ಭುತ ಆಕ್ರೋಬಾಟಿಕ್ ಸಾಹಸದಿಂದ ನೆಟ್ಟಿಗರ ಮನ ಸೂರೆಗೊಂಡಿದ್ದಾರೆ.
ನೀರಿನಾಳದಲ್ಲಿ ತಮ್ಮ ಜಿಮ್ನಾಸ್ಟಿಕ್ ಕೌಶಲ್ಯದ ಪರಿಯನ್ನು ಪರಿಚಯಿಸುತ್ತಿರುವ ಕ್ರಿಸ್ಟಿನಾ ಇನ್ಸ್ಟಾಗ್ರಾಂನಲ್ಲಿರುವ ತಮ್ಮ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಅದರಲ್ಲಿ ಈಜುಕೊಳವೊಂದರಲ್ಲಿ ಜಿಮ್ನಾಸ್ಟಿಕ್ ಮಾಡುತ್ತಿರುವುದನ್ನು ನೋಡಬಹುದಾಗಿದೆ.
ಮಂಜರಾಬಾದ್ ಕೋಟೆಯನ್ನ ನೋಡಿದ್ದೀರಾ…..?
ರಂಗುರಂಗಿನ ರಿಬ್ಬನ್ ಒಂದನ್ನು ತಮ್ಮ ಸುತ್ತಲೂ ಗಿರಕಿ ಹೊಡೆಸುತ್ತಾ ತಮ್ಮ ಮೈಯನ್ನೂ ಸಹ ಹಾಗೇ ಬಳುಕಿಸುವ ಕ್ರಿಸ್ಟಿನಾ ಅವರು ಕಲಾ ಈಜಿನಲ್ಲಿ ವಿಶ್ವಚಾಂಪಿಯನ್ ಆಗಿದ್ದಾರೆ. ಇನ್ಸ್ಟಾಗ್ರಾಂ ಹಾಗೂ ಟಿಕ್ಟಾಕ್ನಲ್ಲಿ ಅವರು ಸಖತ್ ಫೇಮಸ್ ಸಹ ಆಗಿದ್ದಾರೆ.
ನೀರಿನಾಳದಲ್ಲಿ ನೃತ್ಯ ಮಾಡುವ ತಮ್ಮ ವಿಡಿಯೋಗಳನ್ನು ಪೋಸ್ಟ್ ಮಾಡಿರುವ ಕ್ರಿಸ್ಟಿನಾ, ತಮ್ಮ ಜಿಮ್ನಾಸ್ಟಿಕ್ಸ್ ಮೂಲಕ ನೆಟ್ಟಿಗರ ಕಣ್ಮನ ಸೆಳೆಯುತ್ತಾ ಬಂದಿದ್ದಾರೆ.
https://www.instagram.com/p/CNStM2jAHkT/?utm_source=ig_web_copy_link