ಲಂಡನ್: ಚಿರತೆಯೊಂದು ರಾತ್ರಿ ಹೊತ್ತಿಗೆ ಪಾರ್ಕ್ ನಲ್ಲಿ ಕಾಣಿಸಿಕೊಂಡ ಬಗ್ಗೆ ಇಂಗ್ಲೆಂಡ್ ನ ಹೊರ್ಶಾಂ ಪೊಲೀಸರಿಗೆ ಕರೆಯೊಂದು ಬಂದಿತ್ತು. ತಕ್ಷಣ ಹಾಜರಾಗಿ ನೋಡಿದರೆ ಚಿರತೆ ಬೆಂಚ್ ಮೇಲೆ ಎರಡೂ ಕಾಲಿಟ್ಟು ಎದುರು ನೋಡುತ್ತಿತ್ತು .
ಕಾರಿನ ಬೆಳಕನ್ನು ಹಾಯಿಸಿ ಹೆದರಿಕೆಯಿಂದಲೇ ಹತ್ತಿರ ಹೋದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಅದು ಜೀವಂತ ಪ್ರಾಣಿಯಲ್ಲ. ಚಿರತೆಯ ಗೊಂಬೆಯಾಗಿತ್ತು.
ಇದನ್ನು ಹೊರ್ಶಾಂ ಪೊಲೀಸರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡು, ಫೋಟೋ ಹಾಕಿದ್ದಾರೆ.
“ವರದಿಯಂತೆ ಚಿರತೆಯೊಂದು ಪಾರ್ಕ್ ನ ಬೆಂಚ್ ಮೇಲೆ ಕಾಲಿಟ್ಟು ನಿಂತಿದ್ದು ಹೌದಾಗಿತ್ತು. ಆದರೆ, ಅದೊಂದು ಗೊಂಬೆಯಾಗಿತ್ತು. ಬೇಸರದ ಸಂಗತಿ ಎಂದರೆ ಸ್ಥಳಕ್ಕೆ ತೆರಳುವುದಕ್ಕೂ ಮುಂಚೆ ಪೊಲೀಸರಿಗೆ ಅದು ಗೊತ್ತಿರಲಿಲ್ಲ” ಎಂದು ಕ್ಯಾಪ್ಶನ್ ಬರೆಯಲಾಗಿದೆ.
“ಕೆಲವು ಬಾರಿ ಜೋಕ್ ಕೂಡ ಒಳ್ಳೆಯದೇ” ಎಂದು ಒಬ್ಬರು, “ಇದು ಎಚ್ಚರಿಕೆ ಗಂಟೆಯಾಗಿದೆ” ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.