
ಧರ್ಮಶ್ರದ್ಧೆಯುಳ್ಳ ಜನರು ಒತ್ತಡ, ಉದ್ವೇಗ, ಆತಂಕ, ಖಿನ್ನತೆಯಂತಹ ಸ್ಥಿತಿಗಳನ್ನು ಸಮಚಿತ್ತದಿಂದ ನಿಭಾಯಿಸಬಲ್ಲರು.
ಇದು ಅಮೆರಿಕಾದ ವಿಶ್ವವಿದ್ಯಾಲಯವೊಂದರ ಹೊಸ ಅಧ್ಯಯನ ಹೇಳುತ್ತಿರುವ ಸಂಗತಿ.
ಇಲಿನಾಯ್ಸ್ ಅರ್ಬಾನಾ ಚಾಂಪೈನ್ಸ್ ವಿವಿಯ ಮನಃಶಾಸ್ತ್ರ ಪ್ರಾಧ್ಯಾಪಕ ಫ್ಲೋರಿನ್ ಡೊಲ್ಕೋಸ್ ನೇತೃತ್ವದ ತಂಡವು ಈ ಹೊಸ ಅಧ್ಯಯನ ನಡೆಸಿದ್ದು, ಮನಃಶಾಸ್ತ್ರಜ್ಞರು ಬಳಸುವ ಮಾರ್ಗವನ್ನೇ ಧಾರ್ಮಿಕ ತಜ್ಞರೂ ಬಳಸುತ್ತಾರೆ.
ಯಾವುದೇ ಕಷ್ಟದ ಸಂದರ್ಭವನ್ನು ಎದುರಿಸಲು ಮನಸ್ಸನ್ನು ಸಕಾರಾತ್ಮಕವಾಗಿ ತಯಾರು ಮಾಡಿಕೊಳ್ಳುತ್ತಾರೆ. ತಮ್ಮ ಆಲೋಚನಾ ಕ್ರಮವನ್ನು ಸಕಾರಾತ್ಮಕಗೊಳಿಸುತ್ತಾರೆ. ಇಂತಹುದೇ ಸಾಧನಗಳನ್ನು ಮನಃಶಾಸ್ತ್ರಜ್ಞರು ಬಳಸುವುದು.
ಹೀಗಾಗಿ ವಿಜ್ಞಾನ ಅದರಲ್ಲೂ ಮನೋವಿಜ್ಞಾನ ಮತ್ತು ಧಾರ್ಮಿಕತೆ ಎಂಬುದು ಒಂದೇ ಪುಸ್ತಕದ ಪುಟಗಳು. ಉದ್ವೇಗ, ಖಿನ್ನತೆಯಂತಹ ಸಮಸ್ಯೆ ಎದುರಿಸುತ್ತಿದ್ದ 203 ಜನರನ್ನು ಅಧ್ಯಯನಕ್ಕೆ ಒಳಪಡಿಸಿದ್ದು, ಹೆಚ್ಚು ಧಾರ್ಮಿಕ ಮನೋಭಾವ ಮತ್ತು ಅಧ್ಯಾತ್ಮದ ಮನೋಭಾವ ಇದ್ದವರಿಂದ ಸಕಾರಾತ್ಮಕ ಉತ್ತರಗಳು ಬಂದಿವೆ. ಉಳಿದವರ ಆಲೋಚನೆಯಲ್ಲೇ ನಕಾರಾತ್ಮಕತೆ ಕಂಡಿದ್ದು, ಅಂತಹವರು ಇಂತಹ ಸಮಸ್ಯೆಗಳಿಂದ ಹೊರಬರಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಅವರಲ್ಲಿ ಆತ್ಮವಿಶ್ವಾಸದ ಕೊರತೆಯೂ ಹೆಚ್ಚಿರುತ್ತದೆ.