alex Certify ನಗೆಪಾಟಲಿಗೀಡಾಗಿದೆ ಪಾಕ್ ವಿಶ್ವವಿದ್ಯಾಲಯದ ಎಡವಟ್ಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗೆಪಾಟಲಿಗೀಡಾಗಿದೆ ಪಾಕ್ ವಿಶ್ವವಿದ್ಯಾಲಯದ ಎಡವಟ್ಟು

ಪಾಕಿಸ್ತಾನ ಒಂದು ಎಡವಟ್ಟು ರಾಷ್ಟ್ರ ಅನ್ನೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಈ ದಿನಗಳಲ್ಲಿ ಪಾಕಿಸ್ತಾನ ವಿಚಿತ್ರ ವಿಷಯವೊಂದಕ್ಕಾಗಿ ಭಾರೀ ಸುದ್ದಿಯಲ್ಲಿದೆ.

ಪಾಕಿಸ್ತಾನದ ವಿಶ್ವವಿದ್ಯಾಲಯವೊಂದು ತನ್ನ ಇಬ್ಬರು ವಿದ್ಯಾರ್ಥಿಗಳಿಗೆ ಸಂಗೀತ ಕೇಳುತ್ತಿದ್ದರು ಎಂಬ ಕಾರಣಕ್ಕೆ 5 ಸಾವಿರ ರೂಪಾಯಿ ದಂಡ ವಿಧಿಸಿದೆ.

ದಂಡದ ಜೊತೆಯಲ್ಲಿ ಆಂಗ್ಲ ಭಾಷೆಯಲ್ಲಿ ಇಬ್ಬರೂ ವಿದ್ಯಾರ್ಥಿಗಳಿಗೆ ನೋಟಿಸ್​ ನೀಡಲಾಗಿದೆ. ಇದೀಗ ಈ ನೋಟಿಸ್​ನ ಕಾರಣಕ್ಕೆ ಪಾಕಿಸ್ತಾನ ಸೋಶಿಯಲ್ ಮೀಡಿಯಾದಲ್ಲಿ ನಗೆಪಾಟಲಿಗೆ ಗುರಿಯಾಗಿದೆ.

ವಿದ್ಯಾರ್ಥಿಗಳಿಗೆ ನೀಡಲಾದ ನೋಟಿಸ್​ನಲ್ಲಿ ಆಂಗ್ಲ ಭಾಷೆಯನ್ನ ತಪ್ಪು ತಪ್ಪಾಗಿ ಬಳಕೆ ಮಾಡಲಾಗಿದೆ. ಹೀಗಾಗಿ ನೆಟ್ಟಿಗರು ಇಂಗ್ಲಿಷ್​ನ್ನು ಇಷ್ಟು ತಪ್ಪಾಗಿ ಬರೆದ ವ್ಯಕ್ತಿಗೆ ದಂಡ ವಿಧಿಸೋದು ಯಾರು ಅಂತಾ ಪ್ರಶ್ನೆ ಮಾಡಿದ್ದಾರೆ.

ಗೋಮಾಲ್​ ಯೂನಿವರ್ಸಿಟಿಯ ಇನ್​ಸ್ಟಿಟ್ಯೂಟ್​ ಆಫ್​ ಕಂಪ್ಯೂಟಿಂಗ್​ & ಟೆಕ್ನಾಲಜಿ ಡಿಪಾರ್ಟ್​ಮೆಂಟ್​ ಇಂತಹದ್ದೊಂದು ನೋಟಿಸ್​ ನೀಡಿ ಸೋಶಿಯಲ್​ ಮೀಡಿಯಾದಲ್ಲಿ ಪಾಕಿಸ್ತಾನದ ಮಾನ ಹರಾಜಿಗಿಟ್ಟಿದೆ.

https://twitter.com/ImAmirXaman/status/1373083771587661825

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...