
ವಿಶ್ವದ ಅತಿದೊಡ್ಡ ಜಲಪಾತವಾದ ವಿಕ್ಟೋರಿಯಾ ಫಾಲ್ಸ್ ನ ತುದಿಯಲ್ಲಿ ಬಿಕಿನಿ ಶೂಟ್ ಮಾಡಿಸಿಕೊಂಡಿದ್ದೂ ಅಲ್ಲದೆ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಯುವತಿಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿರುವ ವಿಕ್ಟೋರಿಯಾ ಫಾಲ್ಸ್ ನ ಡೇವಿಲ್ ಪೂಲ್ಸ್ ಬಳಿ ಬಿಕಿನಿಯಲ್ಲಿ ಫೋಟ್ ಮಾಡಿಸಿಕೊಳ್ಳಲಾಗಿದೆ. ಪ್ರಮುಖವಾಗಿ ಇದು ವಿಶ್ವದ ಅತ್ಯಂತ ಅಪಾಯಕಾರಿ ಸ್ಥಳ ಎಂದೇ ಗುರುತಿಸಲ್ಪಟ್ಟಿದೆ. ಇಂತಹ ಸ್ಥಳದಲ್ಲಿ ಫೋಟೊ ಶೂಟ್ ಮಾಡಿಸಿಕೊಳ್ಳುವ ಮೂಲಕ ಯುವಕರನ್ನು ಹುಚ್ಚು ಸಾಹಸಗಳಿಗೆ ಪ್ರೇರೇಪಿಸುತ್ತಿರುವುದಕ್ಕೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೆನ್ಸಿಲ್ವೇನಿಯಾದ 25 ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಅಮರಿಸ್ ರೋಸ್ ಎಂಬ ಯುವತಿಯೇ ವಿವಾದ ಮೈಮೇಲೆ ಎಳೆದುಕೊಂಡಿರುವಾಕೆ. ಆದರೂ ಅಗತ್ಯ ಮುನ್ನೆಚ್ಚರಿಕೆ ಕ್ರಮ ಮತ್ತು ಸೂಕ್ತ ಮಾರ್ಗದರ್ಶನ ಪಡೆದು ಫೋಟೋ ಶೂಟ್ ಮಾಡಲಾಗಿದೆ. 1650 ಅಡಿ ಎತ್ತರದ ಆ ಪ್ರದೇಶದಲ್ಲಿ ನಿಲ್ಲಲು ನನಗೆ ಯಾವುದೇ ಭಯ ಇರಲಿಲ್ಲ ಎನ್ನುವ ಮೂಲಕ ಕಮೆಂಟ್ ಗಳಿಗೆ ಬ್ರೇಕ್ ಹಾಕಿದ್ದಾಳೆ.
https://www.instagram.com/p/CIy7NEYlSVW/?utm_source=ig_web_copy_link