ಸ್ವೀಡನ್ ದೇಶದ ಟ್ರೆಲ್ಲೆಂಬರ್ಗ್ ಎಂಬ ಸಣ್ಣ ಪಟ್ಟಣದಲ್ಲಿ ರಾತ್ರಿ ಆಕಾಶ ಈಗ ನೇರಳೆ ಬಣ್ಣದಲ್ಲಿ ಕಾಣುತ್ತಿದ್ದು, ಜನರ ಗಮನ ಸೆಳೆಯುತ್ತಿದೆ.
ಪಟ್ಟಣ ಸಮೀಪದ ಗಿಲ್ಸೊವ್ -10 ಎಂಬ ಟೊಮೆಟೊ ಹೊಲಕ್ಕೆ ಹೊಸ ಸ್ವರೂಪದ ಎಲ್ಇಡಿ ಲೈಟ್ ಅಳವಡಿಸಿದ್ದೇ ಇದಕ್ಕೆ ಕಾರಣವಾಗಿದೆ. ಇದೀಗ ಆಕಾಶದ ಬಣ್ಣ ನೀಲಿಯಾಗಿ ಕಾಣುವ ವಿಡಿಯೋ ಫುಲ್ ವೈರಲ್ ಆಗಿದೆ.
ಈ ನೇರಳೆ ಬಣ್ಣ ಗಿಡಗಳ ಮೇಲೆ ಬೀಳುವುದು ಉತ್ತಮ ಎಂದು ಗಿಲ್ಸೊವ್ ಹಾಗೂ ಟ್ರೆಲ್ಲೆಂಬರ್ಗ್ ನಾಗರಿಕರು ನಂಬಿದ್ದಾರೆ. ಆದರೆ, ಇದರ ಪರಿಣಾಮಗಳ ಕುರಿತು ಸಂಬಂಧಪಟ್ಟ ಇಲಾಖೆಗೆ ದೂರುಗಳು ಹೋಗಿವೆ.
ದಟ್ಟ ಮೋಡಗಳು ಅತಿ ಕೆಳ ಮಟ್ಟದಲ್ಲಿ ಹೋದಾಗ ಮಾತ್ರ ಆಕಾಶ ಈ ರೀತಿ ಕಾಣುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧ ಯೋಜನಾ ಕ್ರಮ ಸಿದ್ಧಪಡಿಸಿದ್ದಾಗಿ ಸ್ಥಳೀಯ ಆಡಳಿತದ ಪರಿಸರ ಅಧಿಕಾರಿ ಮೆಕೆಲೆನ್ ನೊರೇನ್ ತಿಳಿಸಿದ್ದಾರೆ.
ಟೊಮೆಟೊ ಫಾರ್ಮ್ ಅಲ್ ಫ್ರೆಡ್ ಫೆಡರ್ಸನ್ ಎಂಬುವವರಿಗೆ ಸೇರಿದ್ದಾಗಿದೆ. ಅವರು ಹೇಳಿಕೆಯೊಂದನ್ನು ನೀಡಿದ್ದು, “ಟೊಮೆಟೊ ಬೆಳೆಯಲು ಸ್ಥಳೀಯರ ವಿರೋಧವಿಲ್ಲ. ಆದರೆ, ನಾವು ರಾತ್ರಿ ಲೈಟ್ ಬಂದ್ ಮಾಡಿ ಇಡಲು ನಿರ್ಧರಿಸಿದ್ದೇವೆ” ಎಂದಿದ್ದಾರೆ.