ರಕ್ತ ಕಣ್ಣೀರು ಸುರಿಸುತ್ತಿರುವ ವರ್ಜಿನ್ ಮೇರಿ ಪ್ರತಿಮೆಯೊಂದಕ್ಕೆ ನಮಿಸಲು ಇಟಲಿಯನ್ನರು ಒಂದೆಡೆ ಸೇರಿದ್ದಾರೆ. ಈ ಘಟನೆಯು, ಇಲ್ಲಿನ ಕಾರ್ಮಿಯಾನೋ ಲೆಚ್ಚೆ ಎಂಬ ಊರಿನ ಪಾವೋಲಿನೋ ಅರ್ನೆಸಾನೋ ಚೌಕದ ಬಳಿ ಘಟಿಸಿದೆ.
1943ರಲ್ಲಿ ಸ್ಥಾಪಿಸಲಾದ ಪ್ರತಿಮೆಯ ಈ ಪವಾಡವನ್ನು ವೀಕ್ಷಿಸಲು ದೊಡ್ಡ ಮಟ್ಟದಲ್ಲಿ ಭಕ್ತಗಣವನ್ನು ಆಕರ್ಷಿಸಿದೆ. ಪ್ರತಿಮೆಯ ಬಲಗಣ್ಣಿನಿಂದ ರಕ್ತಕಣ್ಣೀರು ಸುರಿಯುತ್ತಿದ್ದರೆ, ಅದರ ಬುಡದಲ್ಲಿ ಜನರು ನಿಂತಿರುವುದನ್ನು ಕಾಣಬಹುದಾಗಿದೆ.
ಆದರೆ, ಈ ಪವಾಡದ ಬಗ್ಗೆ ಸಾಕಷ್ಟು ಅಂತಕಂತೆಗಳಿದ್ದು, ಸದ್ಯ ಇರುವ ಬಿಸಿಲು ತಾಪಮಾನದ ಕಾರಣದಿಂದಲೂ ಅಥವಾ ಯಾರೋ ತಮಾಷೆ ಮಾಡಲೆಂದೋ ಈ ಕೆಲಸ ಮಾಡಿರುವ ಸಾಧ್ಯತೆ ಇದೆ ಎಂದು ಇಲ್ಲಿನ ಸಾಂಟ್ ಆಂಟೋನಿಯೋ ಅಬಾಟೆ ಚರ್ಚ್‌ನ ಪಾದ್ರಿ ರಿಚಾರ್ಡೋ ಕಲಾಬ್ರೆಸೆ ತಿಳಿಸಿದ್ದಾರೆ.
https://www.facebook.com/vivi.citta/posts/10213145926321421