
ಮಾಟಗಾರ ಕಳೆ ಇದೆ ಎಂದು ಮನೆಯವರು ಹೊರಹಾಕಿದ ಕಾರಣ ನೈಜೀರಿಯಾದ ಬೀದಿಗಳಲ್ಲಿ ದಿಕ್ಕಾಪಾಲಾಗಿ ಅಲೆದಾಡುತ್ತಿದ್ದ ಪುಟಾಣಿಯೊಬ್ಬನಿಗೆ ಮರುಜೀವ ಸಿಕ್ಕಿದೆ.
ಜನವರಿ 2016ರಲ್ಲಿ ಸೆರೆ ಹಿಡಿಯಲಾದ ಹೋಪ್ ಹೆಸರಿನ ಈ ಬಾಲಕನ ಚಿತ್ರ ವೈರಲ್ ಆಗಿತ್ತು. ಚಾರಿಟಿ ಕಾರ್ಯಕರ್ತೆ ಅಂಜಾ ರಿಂಗೆರ್ನ್ ಲವೆನ್ ಅವರು ಈ ಪುಟ್ಟನೊಂದಿಗೆ ಮಂಡಿಯೂರಿ ಕುಳಿತು ಆತನನ್ನು ಆರೈಕೆ ಮಾಡುತ್ತಿರುವ ಹೃದಯಸ್ಪರ್ಶಿ ಚಿತ್ರವೊಂದು ನೋಡುಗರ ಮನಕಲಕಿತ್ತು.
ಆ ವೇಳೆ ದುರ್ಬಲ ದೇಹಿಯಾಗಿದ್ದ ಹೋಪ್ ಅಪೌಷ್ಠಿಕತೆಯ ಸಮಸ್ಯೆಯಿಂದ ನರಳುತ್ತಿದ್ದ. ಆತನನ್ನು ವಾರಗಳ ಮಟ್ಟಿಗೆ ಆಸ್ಪತ್ರೆಗೆ ದಾಖಲಿಸಿ, ಕ್ರಿಟಿಕಲ್ ಸ್ಥಿತಿಯಿಂದ ಹೊರತರಲು ಹರಸಾಹಸ ಮಾಡಬೇಕಾಯಿತು. ಇದೀಗ ಬಹಳ ಆರೋಗ್ಯಪೂರ್ಣನಾಗಿ ಇರುವ ಹೋಪ್‌ನನ್ನು ಎನ್‌ಜಿಓ ಒಂದು ದತ್ತು ಪಡೆದಿದ್ದು, ಆತನಿಗೆ ಬೇಕಾದ ಆರೈಕೆ ಹಾಗೂ ಶಿಕ್ಷಣವನ್ನು ಒದಗಿಸುತ್ತಿದೆ.


