ಪರಿಸರ ಸ್ನೇಹಿ ಮಂತ್ರ ಎಲ್ಲೆಡೆ ಸದ್ದು ಮಾಡುತ್ತಿರುವ ಸಂದರ್ಭದಲ್ಲಿಯೇ ನೆದರ್ಲೆಂಡ್ಸ್‌ನ ವಿದ್ಯಾರ್ಥಿಗಳೆಲ್ಲಾ ಸೇರಿಕೊಂಡು ವಿಶಿಷ್ಟವಾದ ಶವಪೆಟ್ಟಿಗೆಯೊಂದನ್ನು ನಿರ್ಮಿಸಿದ್ದಾರೆ.
ಜೀವಂತ ಗೂಡೆಂದು ಕರೆಯಲಾಗುವ ಈ ಪೆಟ್ಟಿಗೆಯನ್ನು ಡೆಲ್ಫ್ಟ್ ವಿವಿಯ ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳು ರಚಿಸಿದ್ದಾರೆ. ಈ ಪೆಟ್ಟಿಗೆಯಲ್ಲಿರುವ ಶವಗಳು ಬೇಗನೇ ಕೊಳೆಯುವುದಲ್ಲದೇ ಸುತ್ತಲಿರುವ ಮಣ್ಣಿನಲ್ಲಿರುವ ವಿಷಯಕ್ತತೆಯನ್ನು ತೆಗೆದುಹಾಕಿ ಹೊಸ ಗಿಡಗಳು ಬೆಳೆಯಲು ಸೂಕ್ತ ವಾತಾವರಣ ಸೃಷ್ಟಿಸುತ್ತದೆ.
ಮರಗಳು, ಗಿಡಗಳು ಹಾಗೂ ಫಂಗಸ್‌ನಲ್ಲಿರುವ ಬೇರುಗಳಲ್ಲಿ ಇರುವ ಮೈಸೆಲಿಯಮ್ ಎಂಬ ಸ್ವಾಭಾವಿಕ ರೀಸೈಕ್ಲರ್ ಅನ್ನು ಬಳಸುವ ಈ ಶವಪೆಟ್ಟಿಗೆ, ವಿಷಯುಕ್ತ ಪದಾರ್ಥಗಳನ್ನು ಮಾರ್ಪಾಡು ಮಾಡಿ ಸಸಿಗಳಿಗೆ ಪೋಷಕಾಂಶಗಳನ್ನು ಸೃಷ್ಟಿಸಬಲ್ಲದು. ರಾಟರ್‌ಡ್ಯಾಮ್ ಹಾಗೂ ಚರ್ನೋಬಿಲ್‌ಗಳ ಮಣ್ಣನ್ನು ಶುದ್ಧಗೊಳಿಸಲು ಈ ತಂತ್ರವನ್ನು ಬಳಕೆ ಮಾಡಲಾಗಿದೆ.
https://www.facebook.com/bob.hendrikx.7/videos/3377682328954718/?t=3