ಸಾಮಾನ್ಯವಾಗಿ ಸುದ್ದಿಗೋಷ್ಟಿ ಅಂದರೆ ಯಾವುದಾದರೂ ಒಂದು ಹಾಲ್ನಲ್ಲೋ ಅಥವಾ ಸರ್ಕಾರಿ ಕಚೇರಿಗಳಲ್ಲೋ, ಮನೆಗಳಲ್ಲೋ ಮಾಡೋದನ್ನು ನೋಡಿದ್ದೇವೆ. ಎಲ್ಲಾದರೂ ಮರದ ಮೇಲೆ ಸುದ್ದಿಗೋಷ್ಟಿ ಮಾಡೋದನ್ನು ನೋಡಿದ್ದೀರಾ…? ಹೀಗೊಂದು ಸುದ್ದಿಗೋಷ್ಟಿ ನಡೆದಿದ್ದು ದೊಡ್ಡ ಚರ್ಚೆ ಹುಟ್ಟು ಹಾಕಿದೆ.
ಹೌದು, ಶ್ರೀಲಂಕಾದ ತೆಂಗು ಸಚಿವ ಅರುಂಧಿಕಾ ಫರ್ನಾಂಡೊ ಡಂಕೋಟುವಾದಲ್ಲಿರುವ ತಮ್ಮ ತೋಟದಲ್ಲಿ ಮರವೇರಿದ್ದಾರೆ. ಸುದ್ದಿಗೋಷ್ಟಿ ಗೆ ಬಂದ ಪತ್ರಕರ್ತರಿಗೆ ಈ ಘಟನೆ ನಿಜಕ್ಕೂ ಅಚ್ಚರಿ ಎನಿಸಿದೆ. ಸುದ್ದಿಗೋಷ್ಟಿಗೆ ಕರೆದು ಹೀಗೆ ಮರವನ್ನೇಕೆ ಏರಿದ್ದಾರೆ ಎಂಬ ಅನುಮಾನ ಕಾಡಿದೆ. ಮರದ ಮೇಲೆಯೇ ಸುದ್ದಿಗೋಷ್ಟಿ ನಡೆಸಿದ್ದು ನಿಜಕ್ಕೂ ಒಂದು ರೀತಿಯಲ್ಲಿ ಆಶ್ಚರ್ಯ ಉಂಟಾಗಿದೆ.
ಶ್ರೀಲಂಕಾದಲ್ಲಿ ತೆಂಗಿನ ದರ ಏರಿಕೆಯಾಗುತ್ತಿದ್ದು ಪೂರೈಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಟಿ ನಡೆಸಿದ್ದರು ಎನ್ನಲಾಗಿದೆ. ಶ್ರೀಲಂಕಾದ ಈ ಸಚಿವರ ನಡೆ ಒಂದು ರೀತಿಯಲ್ಲಿ ನಗು ತರಿಸಿದರೆ ಮತ್ತೊಂದು ರೀತಿ ಆಶ್ಚರ್ಯಕ್ಕೆ ಹಾಗೂ ಎಲ್ಲರ ಗಮನ ಸೆಳೆಯಲು ಕಾರಣವಾಗಿದೆ.