
ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಲಾದ ಗೊಂಬೆಯ ಫೋಟೋದಲ್ಲಿ ಗುಲಾಬಿ ಬಣ್ಣದ ಸೀರೆ ಹಾಗೂ ಸಾಂಪ್ರದಾಯಿಕ ಆಭರಣಗಳಿಂದ ಗೊಂಬೆಯನ್ನ ಅಲಂಕರಿಸಿರೋದು ಕಂಡು ಬರುತ್ತಿದೆ. ವಿಶ್ವ ಸುಂದರಿ ಸ್ಪರ್ಧೆಯ ಸಾಂಪ್ರದಾಯಿಕ ಉಡುಪು ಸುತ್ತಿನಲ್ಲಿ ಆಡ್ಲಿನ್ ಕಾಸ್ಟಲಿನೋ ದೇಶವನ್ನ ಪ್ರತಿನಿಧಿಸಲು ಈ ರೂಪದಲ್ಲಿ ಕಾಣಿಸಿಕೊಂಡಿದ್ದರು.
ದಾರಿಹೋಕರಿಗೆ ವ್ಯಾಪಾರಿಯಿಂದ ಉಚಿತ ಬಾಳೆಹಣ್ಣು
ವೇಷಭೂಷಣವು ಮಹಿಳೆಯ ಸೌಂದರ್ಯವನ್ನ ದುಪ್ಪಟ್ಟು ಮಾಡುತ್ತೆ. ಸೀರೆ ಒಂದು ಸಾಂಪ್ರದಾಯಿಕ ಉಡುಪಾಗಿದ್ದು ಇದು ಸಂಪೂರ್ಣ ಭಾರತೀಯರನ್ನ ಒಂದು ಮಾಡುವ ಸಾಮರ್ಥ್ಯ ಹೊಂದಿದೆ. ಭಾರತದ ರಾಷ್ಟ್ರೀಯ ಪುಷ್ಪವಾದ ಕಮಲದಿಂದ ಸ್ಪೂರ್ತಿ ಪಡೆದು ಗುಲಾಬಿ ಬಣ್ಣದ ಸೀರೆಯನ್ನ ತಯಾರಿಸಲಾಗಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಹಾಗೂ ಆಡ್ಲಿನ್ ಕಾಸ್ಟಲಿನೋಗೂ ಅಭಿನಂದನೆ ಸಲ್ಲಿಸಲಾಗಿದೆ.
ವಿವಾದಿತ ಹೇಳಿಕೆ ಹಿಂಪಡೆದ ಯೋಗ ಗುರು ಬಾಬಾ ರಾಮದೇವ್
ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಆಡ್ಲಿನ್ ಕಾಸ್ಟಲಿನೋ ಧರಿಸಿದ್ದ ಸೀರೆಯನ್ನ ವಸ್ತ್ರ ವಿನ್ಯಾಸಕಾರ ಶ್ರವಣ್ ಕುಮಾರ್ ವಿನ್ಯಾಸಗೊಳಿಸಿದ್ದರು. ಸಾಂಪ್ರದಾಯಿಕ ಆಭರಣವನ್ನ ಕ್ಯುರಿಯೋ ಕಾಟೇಜ್ ತಯಾರಿಸಿಕೊಟ್ಟಿತ್ತು. ಈ ಇನ್ಸ್ಟಾಗ್ರಾಂ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸ್ವತಃ ಆಡ್ಲಿನ್ ಕಾಸ್ಟಲಿನೋ ಕೂಡ ಈ ಫೋಟೋವನ್ನ ತಮ್ಮ ಇನ್ಸ್ಟಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
