ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಎಲ್ಲೆಡೆ ಮಾಸ್ಕ್ ಕಡ್ಡಾಯವಾಗಿದ್ದು, ಶ್ರೀಲಂಕಾದ ಸಿಲೋನ್ ಟೀ ಪುಡಿಯನ್ನು ಇನ್ನಷ್ಟು ಪ್ರಚುರಪಡಿಸಲು ಈ ಸಂದರ್ಭವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದೆ.
ಕೊರೊನಾಕ್ಕೂ, ಮಾಸ್ಕ್ ಕಡ್ಡಾಯ ಮಾಡಿರುವುದಕ್ಕೂ, ಸಿಲೋನ್ ಟೀ ಪುಡಿಗೆ ಖ್ಯಾತಿ ಬರುವುದಕ್ಕೂ ಎತ್ತಣದಿಂತ್ತೆಣ ಸಂಬಂಧ ಎಂದು ಯೋಚಿಸುತ್ತಿರುವಿರಾ ? ಇದೆ, ಸಂಬಂಧ ಇದೆ.
ಪ್ರಪಂಚದ ಹಲವೆಡೆ ಶ್ರೀಲಂಕಾ ಪ್ರಜೆಗಳು ವಾಸವಿದ್ದು, ಅವರೆಲ್ಲರಿಗೂ ಶ್ರೀಲಂಕಾದಿಂದ ಮಾಸ್ಕ್ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ.
ವಿಶೇಷವೆಂದರೆ, ಶ್ರೀಲಂಕಾ ತಯಾರಿಸಿ ಪ್ರಪಂಚದ ಉದ್ದಗಲಕ್ಕೂ ಕಳುಹಿಸಿಕೊಡುತ್ತಿರುವ ಪ್ರತಿ ಮಾಸ್ಕ್ ಕೂಡ ಸಿಲೋನ್ ಟೀ ಬಣ್ಣದಲ್ಲಿ ಇದ್ದು, ಜನರ ಆರೋಗ್ಯ ಕಾಪಾಡುವುದರ ಜೊತೆಗೆ ಮಾಸ್ಕ್ ಗಳು ಗಮನ ಸೆಳೆಯುತ್ತಿದೆ. ಚಹಾದ ರಂಗು ಬಳಿದುಕೊಂಡ ಮಾಸ್ಕ್ ಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಶ್ರೀಲಂಕಾ ಚಹಾ ಮಂಡಳಿ ಪ್ರಕಾರ, ಮಾಸ್ಕ್ ಕೂಡ ಮಂಡಳಿಯ ಉಪ ಉತ್ಪನ್ನವಾಗಿದ್ದು, 30 ಬಾರಿ ತೊಳೆದು ಬಳಸಬಹುದು. ಪರಿಸರಸ್ನೇಹಿಯಾದ ಈ ಮಾಸ್ಕ್ ಗಳನ್ನು ಉಡುಗೊರೆಯಾಗಿ ನೀಡುವ ಸಂಬಂಧವೂ ವಿದೇಶಾಂಗ ವ್ಯವಹಾರ ಸಚಿವಾಲಯದೊಂದಿಗೆ ಒಪ್ಪಂದ ಆಗಿದೆ.