
ಟೋಕಿಯೋ ಒಲಿಂಪಿಕ್ – 2020, ವಿಂಬಲ್ಡನ್ ಮುಂತಾದ ಕ್ರೀಡೋತ್ಸವಗಳು ರದ್ದಾಗಿದ್ದರಿಂದ ಕ್ರೀಡಾ ಪ್ರೇಮಿಗಳು ಬೇಸರಗೊಂಡಿದ್ದಾರೆ. ಆದರೆ, ಇಲ್ಲಿನ ಕ್ರೀಡಾ ಪ್ರೇಮಿ ಬೆಕ್ಕುಗಳು ಮಾತ್ರ ಸ್ಥಳೀಯವಾಗಿ ಖುಷಿ ಕಂಡುಕೊಂಡಿವೆ.
ಮೂರು ಬೆಕ್ಕುಗಳು ಎತ್ತರ ಪ್ರಕಾರವಾಗಿ ಕಿಟಕಿಯಲ್ಲಿ ಕುಳಿತು ಮಕ್ಕಳಿಬ್ಬರು ಥ್ರೋ ಬಾಲ್ ಆಡುತ್ತಿರುವುದನ್ನು ವೀಕ್ಷಿಸುವ ಪರಿಗೆ ನೆಟ್ಟಿಗರು ಬೆರಗಾಗಿದ್ದಾರೆ.
ವಿಶಿಷ್ಟ ಪ್ರಾಣಿಗಳ ವಿಡಿಯೋ, ಫೋಟೋಕ್ಕೆ ಹೆಸರಾದ ಇಂಮ್ ಗೂರ್ ಎಂಬ ವೆಬ್ ಸೈಟ್ ನಲ್ಲಿ ವಿಡಿಯೋ ಅಪ್ ಲೋಡ್ ಆಗಿದೆ. ನಂತರ ಅದನ್ನು ಟ್ವಿಟ್ಟರ್ ನಲ್ಲಿ ಸ್ಮಿತ್ ಅವರು ಸ್ಪೋರ್ಟ್ಸ್ ಫ್ಯಾನ್ ಡೆ ಎಂಬ ಕ್ಯಾಪ್ಶನ್ ನೊಂದಿಗೆ ಪೋಸ್ಟ್ ಮಾಡಿದ್ದಾರೆ.
ಮೂರು ಮುದ್ದಾದ ಬೆಕ್ಕುಗಳು ಶಿಸ್ತಾಗಿ ಕುಳಿತು, ಮಕ್ಕಳ ಕೈಯಿಂದ ಬಾಲ್ ಅತ್ತಿಂದಿತ್ತ ಓಡಾಡುವುದನ್ನೇ ತದೇಕಚಿತ್ತವಾಗಿ ಅದರೊಟ್ಟಿಗೇ ತಲೆಯಾಡಿಸುತ್ತ ನೋಡುತ್ತವೆ. ನಡುವೆ ಕುಳಿತ ಒಂದು ಬೆಕ್ಕು ಒಂದು ಕಾಲನ್ನು ಎತ್ತಿಕೊಂಡಿದೆ. ಅವುಗಳ ಆಟ ನೋಡುವುದೇ ಒಂದು ಚಂದವಾಗಿದೆ.