ಫ್ಲಾರಿಡಾದ ಸಿನ್ಸಿನಾಟಿ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಡಾಲ್ಮೇಶನ್ ಗೊಂಬೆಯೊಂದನ್ನು ನಿಲ್ದಾಣದ ಸಿಬ್ಬಂದಿ ಅದರ ವಾರಸುದಾರ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.
ಸಿನ್ಸಿನಾಟಿ/ಉತ್ತರ ಕೆಂಟುಕಿ ವಿಮಾನ ನಿಲ್ದಾಣದ ಸಿಬ್ಬಂದಿ ಈ ಗೊಂಬೆಯನ್ನು ಅದರ ಮಾಲೀಕರಿಗೆ ತಲುಪಿಸಲೆಂದು ಸಾಮಾಜಿಕ ಜಾಲತಾಣದಲ್ಲೆಲ್ಲಾ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಗೊಂಬೆ ಮಿಸ್ಸಿಂಗ್ ಆಗಿರುವ ಪೋಸ್ಟ್ ಅನ್ನು ಫೇಸ್ಬುಕ್‌ನಲ್ಲಿ ಹಾಕಿದ ಬಳಿಕ ಅದು ದಶಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿತ್ತು ಎಂದು ವಿಮಾನ ನಿಲ್ದಾಣದ ವಕ್ತಾರ ಮಿಂಡಿ ಕರ್ಶನೆರ್ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಡೌಗ್ ಹಾಗೂ ಫಿಲ್ಲಿಸ್ ರಾಂಕೋ, ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿ, ಆ ಗೊಂಬೆ ತಮ್ಮದು ಎಂದು ಸಾಬೀತು ಮಾಡಿದ ಬಳಿಕ, ನಿಲ್ದಾಣದ ಸಿಬ್ಬಂದಿಗೆ ಅವರ ಮಗನ ಗೊಂಬೆಯನ್ನು ಕುಟುಂಬದ ಬಳಿ ಸೇರಿಸಲು ವ್ಯವಸ್ಥೆ ಮಾಡಿದ್ದಾರೆ.