ಸ್ಪೇಸ್ ಎಕ್ಸ್ ಫಾಲ್ಕನ್ನ ರಾಕೆಟ್ ಬೂಸ್ಟರ್ ಗಳೆರಡು ಭೂಮಿಯ ಮೇಲೆ ಬೀಳುತ್ತಿರುವ ದೃಶ್ಯಾವಳಿಯು ವೈರಲ್ ಆಗಿದ್ದು, ನೆಟ್ಟಿಗರು ಸೈ-ಫೈ ಚಿತ್ರಗಳು ಹಾಗೂ ಟಿವಿ ಶೋಗಳಿಗೆ ಹೋಲಿಕೆ ಮಾಡಿ ಚಕಿತರಾಗಿದ್ದಾರೆ.
ಕಳೆದ ಜೂನ್ನಲ್ಲಿ ಕೇಪ್ ಕನೆರಿವಾಲ್ನಿಂದ STP-2 ಮಿಶನ್ ಟೇಕ್ ಆಫ್ ಆಗಿತ್ತು. ಈ ರಾಕೆಟ್ಗಳು 24 ಪ್ರಯೋಗಾರ್ಥ ಉಪಗ್ರಹಗಳನ್ನು ತಮ್ಮೊಂದಿಗೆ ಕೊಂಡೊಯ್ದಿದ್ದವು. ಈ ಉಡಾವಣೆಯನ್ನು ಸ್ಲೋ ಮೋಷನ್ ರಿಮೋಟ್ ಕ್ಯಾಮೆರಾಗಳ ಮೂಲಕ ಸೆರೆ ಹಿಡಿದು, ಅದ್ಭುತವಾದ ಚಿತ್ರಾವಳಿಯನ್ನು ನೋಡುಗರಿಗೆ ಕೊಡಮಾಡಲಾಗಿತ್ತು.
ಇದೀಗ ಆ ರಾಕೆಟ್ಗಳ ಬೂಸ್ಟರ್ ಗಳು ಮರಳಿ ಭೂಮಿಗೆ ಬೀಳುತ್ತಿರುವ ಸಂದರ್ಭದಲ್ಲಿ ಕತ್ತಲಿನ ನಡವೆ ದೊಡ್ಡ ಬೆಳಕು ಮೂಡಿಸುತ್ತಾ ಮುಳುಗುತ್ತಿರುವ ಸೂರ್ಯರಂತೆ ಕಾಣುತ್ತಿವೆ.