alex Certify ಆಕಾಶದಿಂದ ಬಿದ್ದ ಉಲ್ಕಾ ಶಿಲೆಯಿಂದ ಜನರಿಗೆ ದುಡ್ಡಿನ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಕಾಶದಿಂದ ಬಿದ್ದ ಉಲ್ಕಾ ಶಿಲೆಯಿಂದ ಜನರಿಗೆ ದುಡ್ಡಿನ ಸುರಿಮಳೆ

ಈಶಾನ್ಯ ಬ್ರೆಜಿಲ್‌ ನ ಸಾಂತಾ ಫಿಲೋಮಿನಾದ ನಿವಾಸಿಗಳು ಬೆರಗಾಗುವಂತಹ ಬೆಳವಣಿಗೆ ನಡೆದಿದೆ. ನೂರಾರು ಉಲ್ಕಾಶಿಲೆ ಬಂಡೆಗಳು ಆಕಾಶದಿಂದ ಮಳೆಯ ರೂಪದಲ್ಲಿ ಬಿದ್ದಿದೆ.

ವರದಿಗಳ ಪ್ರಕಾರ, ಬಾಹ್ಯಾಕಾಶ ಶಿಲೆಯ ತುಣುಕುಗಳು 4.6 ಶತಕೋಟಿ ವರ್ಷಗಳಷ್ಟು ಹಳೆಯದಾದ ಉಲ್ಕಾಶಿಲೆಯ ಭಾಗವೆಂದು ನಂಬಲಾಗಿದೆ.

ಇನ್ನು ಸಾಂತಾ ಫಿಲೋಮಿನಾದ ಸ್ಥಳೀಯರು ಈ ಶಿಲೆಯನ್ನು ಸಂಗ್ರಹಿಸಿ ಶ್ರೀಮಂತರಾಗಿದ್ದಾರೆ ಎಂದು ವರದಿಗಳು ಹೇಳುತ್ತವೆ. ಒಂದು ತುಣುಕು 40 ಕಿ.ಗ್ರಾಂ.ಗಿಂತ ಹೆಚ್ಚು ತೂಕವಿತ್ತು ಮತ್ತು ಅಂದಾಜು 26,000 ಡಾಲರ್ ಮೌಲ್ಯವನ್ನು ಹೊಂದಿದೆ ಎಂದು ವರದಿಯಾಗಿದೆ.

ಆ ಶಿಲೆಯನ್ನು ಸಂಗ್ರಹಿಸಿ ಜನರು ಉಲ್ಕಾ ಶಿಲೆ ಸಂಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ಆದಾಯ ಬರುತ್ತಿದೆ ಎಂದು ಹೇಳಲಾಗುತ್ತಿದೆ. ಈ ಶಿಲೆಯನ್ನು ವಿದೇಶಗಳಲ್ಲಿ ಮಾರಾಟ ಮಾಡಲು ಕೆಲವರು ಖರೀದಿಸುತ್ತಿದ್ದಾರಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...