
ಅಂತರ್ಜಾಲ ಎನ್ನುವುದು ಮಾಯಾಲೋಕ. ಇಲ್ಲಿ ಯಾವುದು ಯಾವಾಗ ಮುಖ್ಯವಾಗುವುದೋ…? ವಿಚಿತ್ರ ಘಟನೆಗಳನ್ನು ಮಾಡುವ ವೇದಿಕೆ ಇದೇ ಆಗಿದೆ. ಇದೀಗ ಈ ರೀತಿಯ ಹುಚ್ಚಾಟ ತೋರಲು ಹೋಗಿ ಕೊರಿಯನ್ ಯೂಟ್ಯೂಬರ್ ಒಬ್ಬ ದೊಡ್ಡ ಸಮಸ್ಯೆಗೆ ಸಿಲುಕಿದ್ದಾನೆ.
ಹೌದು, ದಕ್ಷಿಣ ಕೊರಿಯಾ ಗೇಮರ್ ಶಿನ್ ಟೇ ಎನ್ನುವ ಯೂಟ್ಯೂಬರ್ ಆಂಗ್ರಿ ಕೊರಿಯನ್ ಗೇಮರ್ ಎನ್ನುವ ಹೆಸರಲ್ಲಿ ಭಾರಿ ಸದ್ದು ಮಾಡಿದ್ದರು. ಇದೀಗ ತನ್ನ ವಿಡಿಯೊವನ್ನು ವೈರಲ್ ಮಾಡಲು ಹೋಗಿ, ತನ್ನ ಗುಪ್ತಾಂಗಕ್ಕೆ ಬೆಂಕಿ ಹಚ್ಚಿಕೊಂಡಿದ್ದಾನೆ. ಯೂಟ್ಯೂಬ್‌ನಲ್ಲಿ ಲೈವ್ ಮಾಡುತ್ತಿದ್ದಾಗ, ವೀಕ್ಷಕನೊಬ್ಬ ಹಾಕಿದ ಚಾಲೆಂಜ್ ಗೆ ತನ್ನ ಚಡ್ಡಿಗೆ ಬೆಂಕಿ ಹಚ್ಚಿಕೊಳ್ಳುವ ಸಾಹಸಕ್ಕೆ ಮುಂದಾಗಿದ್ದಾನೆ.
ಆದರೆ ಇದು ಎಡವಟ್ಟಾಗಿ, ಗುಪ್ತಾಂಗಕ್ಕೆ ಬೆಂಕಿ ತಗುಲಿದೆ. ಇದೀಗ ಈ ವಿಡಿಯೊ ಭಾರಿ ವೈರಲ್ ಆಗಿದೆ. ಮೂರು ಗಂಟೆಯ ಲೈವ್‌ನ ಗೇಮ್‌ನಲ್ಲಿ ಏನೋ ಮಾಡಲು ಹೋಗಿ ತನ್ನ ಗುಂಪ್ತಾಗಕ್ಕೆ ಪೆಟ್ಟಾಗಿದ್ದಕ್ಕೆ ನೋವನ್ನು ಅನುಭವಿಸುವಂತಾಗಿದೆ. ಈ ರೀತಿಯ ಹುಚ್ಚು ಸಾಹಸ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ.