ಗಿನ್ನೆಸ್ ವಿಶ್ವದಾಖಲೆಯ ಪುಟದಲ್ಲಿ ನಮ್ಮ ಹೆಸರನ್ನ ನೋಂದಾಯಿಸೋದು ಅಂದ್ರೆ ಸುಲಭದ ಮಾತಲ್ಲ. ವಿಶ್ವದ ಅತಿ ಉದ್ದ ಮನುಷ್ಯ, ಗಿಡ್ಡ ಮನುಷ್ಯ, ದಪ್ಪ, ಸಣ್ಣ ಹೀಗೆ ಇವೆಲ್ಲ ಪ್ರಾಕೃತಿಕವಾಗಿ ನಮ್ಮ ದೇಹ ರಚನೆಗೆ ಸಿಗುವಂತಹ ಬಿರುದುಗಳು. ಆದರೆ ಇದ್ಯಾವ ಲಕ್ಷಣ ಇಲ್ಲದವರೂ ವಿಶ್ವ ದಾಖಲೆ ಮಾಡಬೇಕು ಅಂದರೆ ಅವರು ಪ್ರಯತ್ನದ ಜೊತೆ ಜೊತೆಗೆ ಅಷ್ಟೇ ವಿಭಿನ್ನವಾಗಿ ಚಿಂತನೆಯನ್ನೂ ಮಾಡಬೇಕಾಗುತ್ತೆ .
ಇದೇ ರೀತಿ ಡಿಫರೆಂಟ್ ಆಗಿ ಯೋಚನೆ ಮಾಡಿದ ಸೌತ್ ಕೊರಿಯಾದ ಜುಂಗುಕ್ ಎಂಬ ವ್ಯಕ್ತಿ ಒಂದು ನಿಮಿಷದ ಅವಧಿಯಲ್ಲಿ ಕಲ್ಲಂಗಡಿ ಹಣ್ಣುಗಳಿಗೆ ಅತಿ ಹೆಚ್ಚು ಸಂಖ್ಯೆಯ ಪೇಪರ್ನಿಂದ ಮಾಡಿದ ರಾಕೆಟ್ಗಳನ್ನ ದೂರದಿಂದ ಬೀಸಿ ಚುಚ್ಚುವ ಮೂಲಕ ವಿಶ್ವದಾಖಲೆ ಮೆರೆದಿದ್ದಾರೆ. ಅಂದಹಾಗೆ ಇದು ಹಳೆಯ ವಿಡಿಯೋವಾಗಿದ್ದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ತನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದೆ.