
ಹಾಲಿವುಡ್ ನ ಓಶಿಯನ್ ಇಲೆವೆನ್ ಸಿನಿಮಾ ಮಾದರಿಯಲ್ಲಿ ದಕ್ಷಿಣ ಕೊರಿಯಾದ ಕ್ಯಾಸಿನೋವೊಂದರಲ್ಲಿ ಬರೋಬ್ಬರಿ 13 ದಶಲಕ್ಷ ಡಾಲರ್ ಕಳುವಾಗಿದೆ.
ಇಷ್ಟು ದೊಡ್ಡ ಪ್ರಮಾಣದ ಹಣ ಕಳುವಾದ ನಂತರ ಕ್ಯಾಸಿನೋದಲ್ಲೇ ಕೆಲಸ ಮಾಡುತ್ತಿದ್ದ ಮಲೇಶಿಯಾದ ಮಹಿಳೆ ಕಣ್ಮರೆಯಾಗಿದ್ದು, ಆಕೆಯೇ ಹಣ ಕದ್ದಿರುವ ಶಂಕೆ ವ್ಯಕ್ತವಾಗಿದೆ.
ದಕ್ಷಿಣ ಕೊರಿಯಾದ ಜೆಜು ದ್ವೀಪ ಪ್ರದೇಶದಲ್ಲಿರುವ ಶೈನ್ ಹ್ವಾ ವರ್ಲ್ಡ್ ಕ್ಯಾಸಿನೋದಲ್ಲಿ ಘಟನೆ ನಡೆದಿದ್ದು, ಜೆಜು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿ ನಾಶವಾಗಿದ್ದು, ಪೊಲೀಸರಿಗೆ ಸವಾಲಿನ ಪ್ರಕರಣವೆನಿಸಿದೆ.
ಇನ್ನು ನಾಣ್ಯ, ನೋಟು ಎಲ್ಲ ಸೇರಿ ಸರಿಸುಮಾರು 280 ಕೆಜಿ ತೂಕ ಇರುವುದರಿಂದ ಕದ್ದವರು ಭಾರೀ ದೂರ ಸಾಗಿರಲು ಸಾಧ್ಯವಿಲ್ಲ ಹಾಗೂ ಮಹಿಳೆಯೊಬ್ಬಳೇ ಇಷ್ಟು ಭಾರದ ಮೊತ್ತವನ್ನು ಹೊತ್ತೊಯ್ಯಲಿ ಸಾಧ್ಯವಿಲ್ಲ. ಹೀಗಾಗಿ ಇದರ ಹಿಂದೆ ದೊಡ್ಡ ಗುಂಪು ಇರಬಹುದು ಎಂಬ ಸಂಶಯವಿದೆ.
ವಿಮಾನ ನಿಲ್ದಾಣ, ಬಂದರುಗಳಲ್ಲಿ ಕಟ್ಟೆಚ್ಚರ ವಹಿಸಿದ್ದು, ದರೋಡೆಕೋರರಿಗೆ ಶೋಧಕಾರ್ಯ ನಡೆದಿದೆ.