ದಕ್ಷಿಣ ಕೊರಿಯಾದ ನ್ಯಾಯಾಲಯವು ಸುಮಾರು 8 ದಶಕಗಳ ನಂತರ ಮಹಿಳೆಯರಿಗೆ ನ್ಯಾಯ ನೀಡಿದೆ.
ಎರಡನೇ ಜಾಗತಿಕ ಯುದ್ಧದ ಸಮಯದಲ್ಲಿ ಜಪಾನಿನ ಸೈನಿಕರು ಈ ಮಹಿಳೆಯರ ಮೇಲೆ ಪ್ರತಿದಿನ ಅತ್ಯಾಚಾರ ನಡೆಸುತ್ತಿದ್ದರು. ಸಂತ್ರಸ್ತ 12 ಮಹಿಳೆಯರಿಗೆ ಜಪಾನ್ ಸರ್ಕಾರದಿಂದ 66-66 ಲಕ್ಷ ರೂಪಾಯಿಗಳನ್ನು ನೀಡಬೇಕೆಂದು ದಕ್ಷಿಣ ಕೋರಿಯಾ ಕೋರ್ಟ್ ತೀರ್ಪು ನೀಡಿದೆ.
ದಕ್ಷಿಣ ಕೊರಿಯಾದಲ್ಲಿದ್ದ ಮಹಿಳೆಯರನ್ನು ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನಿನ ಸೈನಿಕರು ಲೈಂಗಿಕ ಗುಲಾಮರನ್ನಾಗಿ ಮಾಡಿದ್ದರು. ಈ ಮಹಿಳೆಯರನ್ನು ಆರಾಮ ನೀಡುವ ಮಹಿಳೆಯರು ಎಂದು ಕರೆಯಲಾಗಿತ್ತು. ಒಂದು ದಿನದಲ್ಲಿ 50-50 ಸೈನಿಕರು ಮಹಿಳೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದರು. ಅನೇಕ ಸೈನಿಕರ ಸಂಭೋಗದಿಂದಾಗಿ ಈ ಮಹಿಳೆಯರು ಅಪಾಯಕಾರಿ ಲೈಂಗಿಕ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದರು. ಈ ಮಹಿಳೆಯರು ಅನಪೇಕ್ಷಿತವಾಗಿ ಗರ್ಭಧರಿಸಬೇಕಾಗಿತ್ತು. ಈ ಮಹಿಳೆಯರಿಗೆ ಜನಿಸುವ ಮಕ್ಕಳಿಗೂ ಸಮಾಜದಲ್ಲಿ ಗೌರವವಿರಲಿಲ್ಲ.
2013ರಲ್ಲಿ ಮಹಿಳೆಯರು ದೂರು ನೀಡಿದ್ದರು. ದಕ್ಷಿಣ ಕೋರಿಯಾ ಕೋರ್ಟ್ ತೀರ್ಪನ್ನು ಜಪಾನ್ ವಿರೋಧಿಸಿದೆ. 1965ರಲ್ಲಿಯೇ ಇದನ್ನು ಪರಿಹರಿಸಲಾಗಿದೆ ಎಂದು ಜಪಾನ್ ಹೇಳಿದೆ. ಅರ್ಜಿ ಸಲ್ಲಿಸಿದ 12 ಮಂದಿಯಲ್ಲಿ ನಾಲ್ವರು ಮಾತ್ರ ಜೀವಂತವಾಗಿದ್ದಾರೆ. ಇನ್ನೂ 20 ಮಹಿಳೆಯರು ತಾವೂ ಕೂಡ ಕಿರುಕುಳಕ್ಕೊಳಗಾಗಿದ್ದೇವೆಂದು ಕೋರ್ಟ್ ಮುಂದೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ.