ಪೆಸಿಫಿಕ್ ಸಾಗರದ ಪಶ್ಚಿಮ ಭಾಗದ ಸಣ್ಣ ದ್ವೀಪವೊಂದರಲ್ಲಿ ಸಿಲುಕಿದ್ದವರನ್ನು SOS ಎಂಬ ಮೂರಕ್ಷರ ಬದುಕುಳಿಸಿದೆ. ಹೌದು, ಸುಮಾರು 600 ಕ್ಕೂ ಹೆಚ್ಚು ದ್ವೀಪಗಳಿರುವ ಪೆಸಿಫಿಕ್ ಸಾಗರದಲ್ಲಿ ಪ್ರಯಾಣಿಸುತ್ತಿದ್ದ ಮೂವರ ಹಡಗಿನ ಇಂಧನ ಖಾಲಿಯಾಗಿ ಪೈಕ್ ಲಾಟ್ ಎಂಬ ದ್ವೀಪದ ಬಳಿ ನಿಂತು ಬಿಟ್ಟಿದೆ.
ದಿಕ್ಕು ತೋಚದಂತಾದ ಮೂವರೂ ಸೇರಿ ಸಾಗರದ ದಡದ ಮರಳಿನ ಮೇಲೆ ಬೃಹದಾಕಾರವಾಗಿ ಎಸ್ಒಎಸ್ ಎಂದು ಬರೆದಿದ್ದಾರೆ. ಗಸ್ತು ತಿರುಗುತ್ತಿದ್ದ ಆಸ್ಟ್ರೇಲಿಯಾ ರಕ್ಷಣಾ ತಂಡದ ಕಣ್ಣಿಗೆ ಈ ಎಸ್ಒಎಸ್ ಬಿದ್ದಿದ್ದು, ಅಮೆರಿಕಾ ರಕ್ಷಣ ದಳದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಲಾಯಿತು.
ಸುಮಾರು 190 ಕಿ.ಮೀ. ದೂರದಲ್ಲಿ ಹಡಗು ಪತ್ತೆಯಾಯಿತು. ಸಂಕಷ್ಟದ ಸಮಯದಲ್ಲಿ ಎಸ್ಒಎಸ್ (ಸೇವ್ ಅವರ್ ಸೋಲ್ಸ್, ಸೇವ್ ಅವರ್ ಶಿಪ್) ಎಂದು ಮರಳಿನ ಬರೆದಿದ್ದರಿಂದ ಬಚಾವ್ ಆಗಿದ್ದಾರೆ.