ಮೊದಲೇ ಕೋವಿಡ್-19 ಸೋಂಕಿನಿಂದ ನಾನಾ ರೀತಿಯಲ್ಲಿ ದಿಗಿಲು ಬಡಿದಂತೆ ಆಗಿರುವ ಜನರಿಗೆ ದಿನೇ ದಿನೇ ಇನ್ನಷ್ಟು ಭೀತಿ ಹೆಚ್ಚಿಸುವ ಸಾಕಷ್ಟು ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಕೋವಿಡ್-19 ಸೋಂಕಿಗೆ ಬಾಧಿತರಾದವರಿಗೆ ಕೆಲವು ತಿಂಗಳು ಬಳಿಕ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಅಮೆರಿಕದ ಸಂಶೋಧಕರ ತಂಡವೊಂದು ತಿಳಿಸಿದೆ. ಈ ಸಂಬಂಧ ಅಧ್ಯಯನದ ವರದಿಯನ್ನು ದಿ ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
ಹೃದಯ ಸಂಬಂಧಿ ಸಮಸ್ಯೆಗಳೊಂದಿಗೆ ಜ್ವರ ಹಾಗೂ ಶ್ವಾಸ ಸಂಬಂಧಿ ಇತರೆ ಸಮಸ್ಯೆಗಳೂ ಸಹ ಕಾಣಿಸಿಕೊಳ್ಳಲಿದ್ದು, ಹೃದಯ ಬಡಿತದಲ್ಲಿ ಆಗುವ ಏರಿಳಿತಗಳ ಕಾರಣದಿಂದ ಹೃದಯ ವೈಫಲ್ಯವೂ ಸಂಭವಿಸಬಹುದು ಎಂದು ವಾಶಿಂಗ್ಟನ್ ವಿವಿಯ ಹೃದಯವಿಜ್ಞಾನ ಕೇಂದ್ರದ ನಿದೇರ್ಶಕ ಚಾರ್ಲ್ಸ್ ಮರ‍್ರಿ ತಿಳಿಸಿದ್ದಾರೆ.