
ಸಾಮಾಜಿಕ ಜಾಲತಾಣದಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಈಗ ಫೇಸ್ಬುಕ್ ನಲ್ಲಿ ಇಂತಹದೆ ಘಟನೆ ನಡೆದಿದೆ. ಮಹಿಳೆಯೊಬ್ಬಳ ಖಾತೆ, ಫ್ರೆಂಡ್ ರಿಕ್ವೆಸ್ಟ್ ಕಳಿಸದೆ ಬಳಕೆದಾರರ ಫ್ರೆಂಡ್ ಲಿಸ್ಟ್ ನಲ್ಲಿ ಕಾಣ್ತಿದೆ. ವಿಶೇಷವೆಂದ್ರೆ ಆ ಖಾತೆಯನ್ನು ಅನ್ ಫ್ರೆಂಡ್ ಮಾಡಲೂ ಸಾಧ್ಯವಾಗ್ತಿಲ್ಲ.
ಸೆಲೀನ್ ಡೆಲ್ಗಾಡೊ ಲೋಪೆಜ್ ಹೆಸರಿನ ಖಾತೆಯ ಪ್ರೊಫೈಲ್ ಫೋಟೋದಲ್ಲಿ ಮಹಿಳೆ ಫೋಟೋಯಿದೆ. ಮಹಿಳೆ ನಗ್ತಿದ್ದಾಳೆ. ಅದ್ರಲ್ಲಿ ಆಕೆ ಮೆಕ್ಸಿಕೊದ ಲಿಯಾನ್ ನಗರದಲ್ಲಿ ವಾಸವಾಗಿದ್ದಾಳೆಂಬುದು ಗೊತ್ತಾಗ್ತಿದೆ. ಇದನ್ನು ಬಿಟ್ರೆ ಬೇರೆ ಯಾವುದೇ ಮಾಹಿತಿ ಲಭ್ಯವಿಲ್ಲ.
ಫ್ರೆಂಡ್ ರಿಕ್ವೆಸ್ಟ್ ಕಳಿಸದೆ ಖಾತೆ ಸೇರ್ತಿರುವ ಇದ್ರ ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ. ಅನೇಕರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ಖಾತೆಯಲ್ಲಿ Add Friend ಆಯ್ಕೆಯಿಲ್ಲ. send message ಆಯ್ಕೆ ಮಾತ್ರ ಇದೆ. ಫೇಸ್ಬುಕ್ ನ ಎಲ್ಲ ಬಳಕೆದಾರರ ಖಾತೆಯಲ್ಲಿ ಈಕೆ ಫ್ರೆಂಡ್ ಆಗಲು ಸಾಧ್ಯವಿಲ್ಲ. ಒಬ್ಬರ ಖಾತೆಯಲ್ಲಿ 5 ಸಾವಿರ ಸ್ನೇಹಿತರು ಮಾತ್ರ ಸೇರಲು ಸಾಧ್ಯ. ಆಕೆ ಖಾತೆಯಲ್ಲಿ ಸದ್ಯ ಯಾವುದೇ ಆತಂಕದ ವಿಷ್ಯವಿಲ್ಲ. ಆದ್ರೆ ಮುಂದಿನ ದಿನಗಳಲ್ಲಿ ಆತಂಕ ಸೃಷ್ಟಿಸುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ.