ತಂದೆಯ ಎಡಭಾಗದಲ್ಲಿ ಡೌನ್ ಸಿಂಡ್ರೋಮ್‌ನಿಂದ ಬಳಲುತ್ತಿರುವ ಬಾಲಕಿ. ಇನ್ನೊಂದು ಕಡೆ ಈಗಷ್ಟೇ ಹುಟ್ಟಿರುವ ನವಜಾತ ಶಿಶು. ಆಳುತ್ತಿದ್ದ ಬಾಲಕಿ, ತನ್ನ ತಮ್ಮನನ್ನು ನೋಡಿದ ಕೂಡಲೇ ಸೈಲೆಂಟ್ ಆಗಿ,
ನಕ್ಕಿರುವ ವಿಡಿಯೊ ಇದೀಗ ವೈರಲ್ ಆಗಿದೆ.
ಹೌದು, ವೆಲ್ ಕಮ್ ಟು ನೇಚರ್ ಎನ್ನುವ ಟ್ವೀಟರ್ ಪೇಜ್‌ನಲ್ಲಿ ಈ ವಿಡಿಯೊ ಹಾಕಲಾಗಿದೆ. ಇದರಲ್ಲಿ ತಂದೆಯ ಹೆಗಲಿನ ಮೇಲೆ ಡೌನ್ ಸಿಂಡ್ರೋಮ್‌ನ ಇರುವ ಬಾಲಕಿ ಅಳುತ್ತ ಕೂತಿರುತ್ತಾಳೆ. ಏನೇ ಮಾಡಿದರೂ ಅಳು ನಿಲ್ಲಿಸುತ್ತಿರಲ್ಲ. ಈ ವೇಳೆ ತಂದೆ ಆಗಷ್ಟೇ ಹುಟ್ಟಿದ ಮಗುವನ್ನು ಎತ್ತಿಕೊಳ್ಳುತ್ತಾರೆ. ಈ ಮಗು ಬರುತ್ತಿದ್ದಂತೆ, ಅಳುತ್ತಿದ್ದ ಮಗು ಸುಮ್ಮನಾಗಿ ನಗಲು ಆರಂಭಿಸಿದೆ.
ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವಿಡಿಯೊಗೆ 8.7ಸಾವಿರಕ್ಕೂ ಮಂದಿ ಲೈಕ್ ಮಾಡಿದ್ದಾರೆ.
https://twitter.com/welcomet0nature/status/1306309880421257222?ref_src=twsrc%5Etfw%7Ctwcamp%5Etweetembed%7Ctwterm%5E1306309880421257222%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fso-so-precious-toddler-meets-newborn-sister-for-the-first-time-wonderful-video-makes-netizens-smile%2F653853