alex Certify ಕಲ್ಲೆದೆಯವರನ್ನೂ ಕರಗಿಸುತ್ತೆ ಈ ಹೃದಯವಿದ್ರಾವಕ ಚಿತ್ರದ ಹಿಂದಿನ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲ್ಲೆದೆಯವರನ್ನೂ ಕರಗಿಸುತ್ತೆ ಈ ಹೃದಯವಿದ್ರಾವಕ ಚಿತ್ರದ ಹಿಂದಿನ ಕಥೆ

ತಾಯಿ – ಮಗನ ಪ್ರೀತಿ ಆಳವನ್ನು ಸಾರುವ ಹೃದಯ ವಿದ್ರಾವಕ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ಯಾಲಿಸ್ತೀನ್‌ನ ಸುವೈತಿ ಹೆಸರಿನ ಈ ಯುವಕ ಆಸ್ಪತ್ರೆಯ ಮರಣ ಶಯ್ಯೆಯಲ್ಲಿದ್ದ ತನ್ನ ತಾಯಿಯನ್ನು ನೋಡಲು ಆಕೆ ಸಾಯುವವರೆಗೂ ಪ್ರತಿ ದಿನ ಗೋಡೆಯೇರಿ ಕಿಟಕಿ ಬಳಿ ಕುಳಿತು ಕಣ್ಣೀರಿಡುತ್ತಿದ್ದ ಚಿತ್ರವೊಂದು ಕಲ್ಲೆದೆಯವರನ್ನೂ ಕರಗಿಸುತ್ತಿದೆ.

ಕೋವಿಡ್-19 ಸೋಂಕಿನ ಕಾರಣದಿಂದ ಮರಣ ಶಯ್ಯೆಯಲ್ಲಿದ್ದ ಈತನ ತಾಯಿಯನ್ನು ನೋಡಲು ಇದ್ದ ನಿರ್ಬಂಧಗಳ ಕಾರಣ ಸುವೈತಿ ಈ ದಾರಿ ಕಂಡುಕೊಂಡಿದ್ದಾನೆ. ತನ್ನ ತಾಯಿಯ ಅಂತಿಮ ದರ್ಶನವನ್ನು ಈ ರೀತಿ ಪಡೆಯಬೇಕಾಗಿ ಬಂದ ಸುವೈತಿಯ ಪರಿಸ್ಥಿತಿ ಕಂಡು ನೆಟ್ಟಿಗರು ಮುಮ್ಮಲ ಮರುಗಿದ್ದಾರೆ. ಫ್ರಾನ್ಸ್‌ನ ಅಲ್‌ ನಾಸ್ ಹೆಸರಿನ ಟ್ಯಾಬ್ಲಾಯ್ಡ್‌ನಲ್ಲಿ ಈ ಚಿತ್ರವನ್ನು ಪ್ರಕಟಿಸಲಾಗಿದ್ದು, ಅದೀಗ ಟ್ವಿಟರ್‌ನಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...