ಸಮುದ್ರದಲ್ಲಿ ಈಜುವಾಗ ಕಳೆದು ಹೋಗಿದ್ದ ಕೈ ಕಡಗ ಮೀನಿಗೆ ಸಿಲುಕಿ, ಅದರ ಚಿತ್ರ ಪ್ರವಾಸಿಗನೊಬ್ಬ ಮೂಲಕ ಫೇಸ್ ಬುಕ್‌ನಲ್ಲಿ ಪ್ರಕಟಗೊಂಡು ಕಡಗದ ನೈಜ ಮಾಲಿಕನಿಗೆ ವಿಷಯ ಮುಟ್ಟಿದ ಪ್ರಸಂಗ ನಡೆದಿದೆ.
ಆಸ್ಟ್ರೇಲಿಯಾದ ಒಂದು ಸಣ್ಣ ದ್ವೀಪದ ಕರಾವಳಿಯಲ್ಲಿ
ಈಜುತ್ತಿದ್ದ ಪ್ರವಾಸಿ ಸುಸಾನ್ ಪ್ರಿಯರ್ ಎಂಬಾತನಿಗೆ ವೆಡ್ಡಿಂಗ್ ಬ್ಯಾಂಡ್ ಮೀನಿನ ಕುತ್ತಿಗೆಯಲ್ಲಿ ಇರುವುದು ಕಂಡಿದೆ.
ತನ್ನ ಕುಟುಂಬದೊಂದಿಗೆ ಪ್ರವಾಸ ಬಂದಿದ್ದ ನಾಥನ್ ರೀವ್ಸ್ ಎಂಬಾತ ತನ್ನ ಎರಡನೇ ವಿವಾಹ ವಾರ್ಷಿಕೋತ್ಸವದಂದೇ ಒಂದು ಸಾವಿರ ಡಾಲರ್ ಮೌಲ್ಯದ ವೆಡ್ಡಿಂಗ್ ಬ್ಯಾಂಡ್ ಈಜುವಾಗ ಕೈಯಿಂದ ಜಾರಿದ್ದು, ಬಳಿಕ ಸಾಕಷ್ಟು ಹುಡುಕಾಡಿದ್ದ.
ನಿಗದಿಯಾಗಿದ್ದ ಮದುವೆ ಮುರಿಯುವಂತೆ ಮಾಡಿದೆ ದುಬಾರಿ ಉಂಗುರ…!
ಈಜಲು ಹೋಗುವ ಮೊದಲು ಅದನ್ನು ತೆಗೆಯುವಂತೆ ನಾನು ಯಾವಾಗಲೂ ಹೇಳಿದ್ದೆ, ನಮ್ಮ ಎರಡನೇ ವಿವಾಹ ವಾರ್ಷಿಕೋತ್ಸವದಂದೇ ಅದನ್ನು ಕಳೆದುಕೊಂಡಿದ್ದ ಎಂದು ಆಕೆಯ ಪತ್ನಿ ಸ್ಥಳೀಯ ಮಾಧ್ಯಮಕ್ಕೆ ಹೇಳಿಕೊಂಡಿದ್ದರು.
ಆದರೆ ಪ್ರವಾಸಿಗನ ಕಣ್ಣಿಗೆ ಮೀನಿನ ಕುತ್ತಿಗೆಯಲ್ಲಿ ಅದು ಸಿಲುಕಿಕೊಂಡಿದ್ದು ಕಂಡುಬಂತು. ಸ್ಥಳೀಯರ ನೆರವಿನಿಂದ ಬಲೆಹಾಕಿ ಮೀನು ಹಿಡಿದು ಕಡಗವನ್ನು ಪಡೆದುಕೊಳ್ಳಲು ಪ್ರಯತ್ನ ನಡೆಯಿತು.