
ಹೊಂಚು ಹಾಕುವ ಪ್ರವೃತ್ತಿಗೆ ಹೆಸರಾದ ಬೆಕ್ಕು ಕದ್ದು ತಿನ್ನುವುದಕ್ಕೂ ಹೆಸರುವಾಸಿ. ಬೆಕ್ಕಿನ ಜತೆಗೆ ಕಳ್ಳಬೆಕ್ಕು ಎಂದು ಸಹಜವಾಗಿ ಪದ ಸೇರಿಕೊಳ್ಳುತ್ತದೆ.
ಇದಕ್ಕೊಂದು ತಾಜಾ ಉದಾಹರಣೆ ಎಂಬಂತೆ ಚೀನಾದ ನಗರವಾದ ಚಾಂಗ್‌ಕಿಂಗ್‌ನಲ್ಲಿ ಖದೀಮ ಬೆಕ್ಕು ಮೀನು ಕದಿಯುವ ವಿಡಿಯೋ ವೈರಲ್ ಆಗಿದೆ.
ವ್ಯಕ್ತಿಯೊಬ್ಬ ಕೆರೆ ದಂಡೆಯಲ್ಲಿ ಕುಳಿತು ಮೀನು ಹಿಡಿದು ತನ್ನ ಪಕ್ಕದಲ್ಲಿದ್ದ ಬಕೆಟ್‌ನಲ್ಲಿ ಹಾಕುತ್ತಿರುತ್ತಾನೆ. ಕಳ್ಳ ಬೆಕ್ಕು ನಿಧಾನವಾಗಿ ಹಿಂಬದಿಯಿಂದ ಮೆತ್ತಗೆ ಬಂದು ಒಳಗೆ ಹಣಕಿ ತನ್ನ ಮುಂಗಾಲಿನಿಂದ ಮೀನುಗಳನ್ನು ಎತ್ತಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು.
ಬೆಕ್ಕಿನ ಸಂಭಾವ್ಯ ದಾಳಿಯನ್ನು ಅರಿತ ಮೀನು ಹಿಡಿಯುವಾತ ಕಿರು ನಗು ಬೀರುತ್ತಾ ಬೆಕ್ಕನ್ನು ದೂರ ತಳ್ಳುತ್ತಾನೆ.