ಫ್ಲಾರಿಡಾದ ಎವರ್‌ಗ್ಲೇಡ್ಸ್ ನಲ್ಲಿ ಉರಗ ತಜ್ಞರೊಬ್ಬರು 17 ಅಡಿ ಉದ್ದದ ಹೆಬ್ಬಾವೊಂದನ್ನು ಹಿಡಿಯಲು ಸಫಲರಾಗಿದ್ದಾರೆ. ಮೈಕ್ ಕಿಮ್ಮೆಲ್ ಎಂಬ ಇವರು ಹೆಬ್ಬಾವನ್ನು ಹಿಡಿಯಲು ಹೆಸರುವಾಸಿಯಾಗಿದ್ದಾರೆ.
ಈ ದೈತ್ಯಾಕಾರದ ಹೆಬ್ಬಾವನ್ನು ದಟ್ಟವಾದ ಹುಲ್ಲುಗಾವಲಿನ ನಡವೆ ಪತ್ತೆ ಮಾಡಿ, ಅದರೊಂದಿಗೆ ಕಾಳಗವನ್ನೇ ನಡೆಸಿ ಕೊನೆಗೂ ಹಿಡಿಯುವಲ್ಲಿ ಸಫಲರಾದ ಕಿಮ್ಮೆಲ್, ಅದರೊಂದಿಗೆ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಹೆಬ್ಬಾವು ಮಾನವರನ್ನು ನುಂಗಬಲ್ಲದಾಗಿದೆ.
https://www.instagram.com/p/CBNudu3pN4E/?utm_source=ig_embed