ಪೆನ್ಸಿಲ್ವೇನಿಯಾದ ಕಿಡ್ಡರ್ ಟೌನ್‌ಶಿಪ್ ಪೊಲೀಸ್ ಇಲಾಖೆಗೆ ಅನಿರೀಕ್ಷಿತ ಅತಿಥಿಯೊಬ್ಬ ಭೇಟಿ ಕೊಟ್ಟಿದ್ದಾನೆ.
ತ್ಯಾಜ್ಯದ ಟ್ರಕ್ ಒಂದನ್ನು ಏರಿದ ಕರಡಿಯೊಂದು ಹಾಗೇ ಡ್ರಾಪ್ ತೆಗೆದುಕೊಂಡು ಪೊಲೀಸ್ ಠಾಣೆಗೆ ಬಂದಿದೆ. ತ್ಯಾಜ್ಯದ ಸಂಗ್ರಹದಲ್ಲಿ ಏನಾದರೂ ತಿನ್ನೋದಕ್ಕೆ ಸಿಗುತ್ತದೆಯೇ ಎಂದು ಹುಡುಕಿ ಹೊರಟ ಕರಡಿಯನ್ನು ಹಾಗೇ ಟ್ರಕ್ ಮೇಲೆ ಕೂರಿಸಿಕೊಂಡಂತೆಯೇ ಅದರ ಚಾಲಕ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾನೆ.
ಜಂಬೂರಾಯನ ಈ ಲಿಫ್ಟ್ ಪ್ರಸಂಗದ ಬಗ್ಗೆ ಕಿಡ್ಡರ್‌ಟೌನ್‌ಶಿಪ್ ಪೊಲೀಸ್ ತನ್ನ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ.
ಪೆನ್ಸಿಲ್ವೇನಿಯಾದ ಕರಡಿಗಳು ಬಲೇ ಸ್ಮಾರ್ಟ್ ಆಗಿದ್ದು, ಪೊಲೀಸ್ ಠಾಣೆಗೆ ಲಿಫ್ಟ್ ಪಡೆಯುವುದಲ್ಲದೇ, ಮೊಬೈಲ್ ಸೆಲ್ಫ್-ಡ್ರೈವಿಂಗ್ ಲಂಚ್ ಬಾಕ್ಸ್‌ಗಳನ್ನೂ ಸಹ ಹೊಂದಿವೆ ಎಂದು ನೆಟ್ಟಿಗರೊಬ್ಬರು ತಮಾಷೆಯ ಕಾಮೆಂಟ್ ಒಂದನ್ನು ಹಾಕಿದ್ದಾರೆ.
https://www.facebook.com/kidderpd/posts/2695901304001509