ಜರ್ಮನಿಯ ಹಾಮ್ ನಗರದಲ್ಲಿ ಅಪಘಾತಕ್ಕೆ ಕಾರಣನಾಗಿದ್ದ ಚಾಲಕನ ತಲಾಶೆಯಲ್ಲಿದ್ದ ಪೊಲೀಸರಿಗೆ ಅನಿರೀಕ್ಷಿತವಾಗಿ ಸುಳಿವು ಸಿಕ್ಕಿದೆ. ಪ್ರೀ ಸ್ಕೂಲ್ ಮಕ್ಕಳು ಮಾಡಿದ ಸ್ಕೆಚ್ ಸಹಾಯದಿಂದ ಬೇಕಾಬಿಟ್ಟಿ ಕಾರು ಚಾಲನೆ ಮಾಡಿ ಅಪಘಾತಕ್ಕೆ ಕಾರಣನಾಗಿದ್ದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಶಾಲೆಯಿಂದ ಮನೆಗೆ ಮರಳುವ ವೇಳೆ ಅಪಘಾತ ಜರುಗುವುನ್ನು ಕಂಡ ನಾಲ್ವರು ಮಕ್ಕಳು ರ‍್ಯಾಶ್ ಡ್ರೈವಿಂಗ್ ಮಾಡಿದಾತನ ಚಹರೆಗಳನ್ನು ಸ್ಕೆಚ್ ಮೂಲಕ ಪೊಲಿಸರಿಗೆ ಸುಳಿವು ಕೊಟ್ಟಿದ್ದಾರೆ. ಆರು ವರ್ಷದ ಮಕ್ಕಳು ಬರೆದ ಈ ಸ್ಕೆಚ್‌ಗಳು ತನಿಖಾ ಫೈಲ್‌ಗಳ ಭಾಗವಾಗಿವೆ.
ಸಂಚಾರೀ ಸಿಗ್ನಲ್ ಬಳಿ ಹಸಿರು ದೀಪಕ್ಕಾಗಿ ಕಾಯುತ್ತಿದ್ದ ಮಕ್ಕಳು ಇದೇ ವೇಳೆ ಕಪ್ಪು ಕಾರೊಂದು ಬಂದು ಬ್ಯಾರಿಕೇಡ್‌ಗೆ ಅಪ್ಪಳಿಸುವುದನ್ನು ಕಂಡಿದ್ದಾರೆ. ಮಾಡುವುದನ್ನು ಮಾಡಿ ಏನೂ ಆಗದವನಂತೆ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.
ಈ ಘಟನೆಯನ್ನು ಕಂಡ ಮಕ್ಕಳು ತಮ್ಮ ಶಿಕ್ಷಕರಿಗೆ ನಡೆದ ಘಟನೆಯನ್ನು ವಿವರಿಸಿದ್ದು, ಜಿಲ್ಲಾ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಇದಕ್ಕೆ ಪೂಕರವಾಗಿ ಸ್ಕೆಚ್ ಒಂದನ್ನು ಮಕ್ಕಳು ಬರೆದುಕೊಟ್ಟಿದ್ದಾರೆ.