alex Certify ಆರು ವರ್ಷದ ಮಗ ಮಾಡಿದ ಕಿತಾಪತಿಗೆ ಬೆಚ್ಚಿಬಿದ್ದ ತಾಯಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರು ವರ್ಷದ ಮಗ ಮಾಡಿದ ಕಿತಾಪತಿಗೆ ಬೆಚ್ಚಿಬಿದ್ದ ತಾಯಿ…!

ಆಪಲ್​ ಬಳಕೆದಾರೆಯಾಗಿದ್ದ ಜೆಸ್ಸಿಕಾ ಜಾನ್ಸನ್​ ಎಂಬಾಕೆ ತನ್ನ ಖಾತೆಯಿಂದ ಆಪಲ್​ ಕಂಪನಿಗೆ ಬರೋಬ್ಬರಿ 11 ಲಕ್ಷ ರೂಪಾಯಿ ವರ್ಗಾವಣೆಯಾಗಿದ್ದನ್ನ ಕಂಡು ಹೌಹಾರಿದ್ದಾಳೆ.

ಆದರೆ ಈಕೆಯ ಹಣ ಡೆಬಿಟ್​ ಕಾರ್ಡ್​ ಇಲ್ಲವೇ ಕ್ರೆಡಿಟ್​​ ಕಾರ್ಡ್​ನ್ನ ಹ್ಯಾಕ್​ ಮಾಡಿ ವಂಚಿಸಿದ್ದಲ್ಲ. ಬದಲಾಗಿ ಆಕೆಯ 6 ವರ್ಷದ ಮಗ ಜಾರ್ಜ್​ ಜೋನ್ಸನ್​ ಆಪಲ್​ ಅಪ್ಲಿಕೇಶನ್​ ಸ್ಟೋರ್​ನಿಂದ ​ ಖರೀದಿ ಮಾಡೋಕೆ ತಾಯಿಗೆ ಗೊತ್ತಿಲ್ಲದಂತೆ ಇಷ್ಟು ದೊಡ್ಡ ಮೊತ್ತದ ಹಣವನ್ನ ಖರ್ಚು ಮಾಡಿದ್ದಾನೆ.

ಜೆಸ್ಸಿಕಾಳ ಪುತ್ರ ಜಾರ್ಜ್​ ತನ್ನ ಐಪ್ಯಾಡ್​ ಬಳಸಿ ಆಪಲ್​ ಪ್ಲೇ ಸ್ಟೋರ್​ನಲ್ಲಿ ಬರೋಬ್ಬರಿ 11 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಜುಲೈ ತಿಂಗಳಲ್ಲಿ ಆಕೆಯ ಖಾತೆಯಿಂದ ಹಣವನ್ನ ಡೆಬಿಟ್​ ಮಾಡಲಾಗಿತ್ತು. ಜೆಸ್ಸಿಕಾ ಮೊದಲು ಇದು ಹ್ಯಾಕರ್ಸ್​ ಕೆಲಸ ಎಂದು ಭಾವಿಸಿದ್ದರು. ಆದರೆ ಬಳಿಕ ಇದು ಮಗನ ಕಿತಾಪತಿ ಎಂಬ ವಿಚಾರ ಬೆಳಕಿಗೆ ಬಂದಿದೆ. ಆಪಲ್​ ಸಂಸ್ಥೆ ಹಣವನ್ನ ವಾಪಾಸ್​ ನೀಡಲು ನಿರಕರಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...