ಅರಬ್ ರಾಷ್ಟ್ರದಲ್ಲಿ ನಡೆದ ಲಕ್ಕಿ ಡ್ರಾನಲ್ಲಿ ಆರು ಮಂದಿ ಭಾರತೀಯರು ಜಾಕ್ಪಾಟ್ ಹೊಡೆದಿದ್ದಾರೆ. ಆರು ಮಂದಿ ಭಾರತೀಯ ಮೂಲದವರಲ್ಲಿ ಐದು ಮಂದಿ ಕೇರಳಿಗರು ಆರರಲ್ಲಿ ಐದು ನಂಬರ್ಗಳನ್ನ ಹೊಂದಿಸುವಲ್ಲಿ ಯಶಸ್ವಿಯಾಗಿದ್ದು ಈ ಮೂಲಕ ಸರಿ ಸುಮಾರು 20276661.60 ರೂಪಾಯಿ ಹಣವನ್ನ ಗೆದ್ದಿದ್ದಾರೆ.
ನನ್ನ ಕೆಲ ಸಹೋದ್ಯೋಗಿಗಳು ಈ ಆಟದಲ್ಲಿ ಭಾಗಿಯಾಗಿದ್ದರು ಹೀಗಾಗಿ ನಾನು ಕೂಡ ಇದೇ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದೆ. ನಾನು ಸದ್ಯ ಕ್ವಾರಂಟೈನ್ ಅವಧಿಯಲ್ಲಿದ್ದು, ನನ್ನ ಸಹೋದ್ಯೋಗಿ ಫೋನ್ ಮಾಡಿ ಈ ವಿಚಾರ ಹೇಳಿದ್ರು. ನನಗಿದು ನನ್ನ ಜೀವನದ ಅಮೂಲ್ಯ ಕ್ಷಣವಾಗಿದೆ ಎಂದು ಅರಬ್ ನಿವಾಸಿ ರಾಬರ್ಟ್ ಹೇಳಿದ್ರು.
ಕೇರಳ ಮೂಲದವರಾದ ರಾಬರ್ಟ್ ಕಳೆದ 40 ವರ್ಷಗಳಿಂದ ಯುಎಇನಲ್ಲಿ ನೆಲೆಸಿದ್ದಾರೆ. ವಿವಾಹಿತರಾಗಿರುವ ರಾಬರ್ಟ್ಗೆ ಇಬ್ಬರು ಹೆಣ್ಣುಮಕ್ಕಳಿದ್ದು ಒಬ್ಬಾಕೆ ಅಬುಧಾಬಿಯಲ್ಲಿದ್ದರೆ ಇನ್ನೊಂದು ಮಗಳು ಅಮೆರಿಕದಲ್ಲಿದ್ದಾಳೆ.
ನನ್ನ ಮಗಳು ಇನ್ನೇನು ಕೆಲವೇ ದಿನಗಳಲ್ಲಿ ವಿವಾಹವಾಗಲಿದ್ದಾಳೆ. ನಾನು ಈ ಹಣವನ್ನ ಆಕೆಗೆ ಉಡೊಗೊರೆ ರೂಪದಲ್ಲಿ ನೀಡುತ್ತೇನೆ ಎಂದು ರಾಬರ್ಟ್ ಹೇಳಿದ್ದಾರೆ.
ಇನ್ನೊಬ್ಬ ಲಕ್ಕಿ ಡ್ರಾ ವಿಜೇತ ಕೇರಳ ಮೂಲದ ಮೊಹಮ್ಮದ್ ಈ ವಿಚಾರವಾಗಿ ಮಾತನಾಡಿ ನನಗೆ ಬಂದ ಇ ಮೇಲ್ ಓದಿದ ಬಳಿಕವೇ ನಾನು ಲಕ್ಕಿ ಡ್ರಾ ಗೆದ್ದಿದ್ದೇನೆ ಎಂಬ ವಿಚಾರ ಗೊತ್ತಾಯ್ತು. ನನಗೆ ಸಂತೋಷ ಹಾಗೂ ಆಶ್ಚರ್ಯಗಳೆರಡೂ ಒಟ್ಟಿಗೆ ಆಯಿತು. ಈ ಹಣದಿಂದ ನನ್ನ ಕೆಲ ಸಾಲವನ್ನ ತೀರಿಸಿಕೊಂಡು ಉಳಿದ ಹಣವನ್ನ ನನ್ನ ಮೂವರು ಮಕ್ಕಳ ಭವಿಷ್ಯಕ್ಕಾಗಿ ಕೂಡಿಡುವೆ ಎಂದು ಹೇಳಿದ್ದಾರೆ.