ಅಮೆರಿಕ ಅಧ್ಯಕ್ಷೀಯ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲೆಡೆ ಈ ಸುದ್ದಿಯೇ ಜೋರಾಗಿದೆ. ಅಮೆರಿಕ ಗಗನಯಾತ್ರಿಗಳು ಹೇಗೆ ಮತ ಹಾಕುತ್ತಾರೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಗಗನಯಾತ್ರಿಗಳು ಮಿಕ್ಕ ಪ್ರಜೆಗಳಂತೆ ಮತ ಹಾಕಲು ಸರತಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ಅವರ ತಾತ್ಕಾಲಿಕ ಮನೆಯಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದಲೇ ಮತ ಚಲಾವಣೆ ಮಾಡಬಹುದಾಗಿದೆ.
ಈ ಬಾರಿಯ ಅಧ್ಯಕ್ಷೀಯ ಚುನಾವಣೆಯ ಮತದಾನದ ವೇಳೆ, ನಾಸಾ ಗಗನಯಾತ್ರಿ ಕೇಟ್ ರುಬಿನ್ಸ್ ತಮ್ಮಿಬ್ಬರು ಸಹೋದ್ಯೋಗಿಗಳೊಂದಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಆರು ತಿಂಗಳ ವಾಸದ ನಡುವೆ ಇರಲಿದ್ದಾರೆ. ಆದರೆ ಈ ಕಾರಣದಿಂದ ತಮ್ಮ ಅಮೂಲ್ಯವಾದ ಮತವನ್ನು ವ್ಯರ್ಥವಾಗಲು ಬಿಡಲು ಅವರಿಗೆ ಮನಸ್ಸು ಇಲ್ಲ.
“ಮತದಾನ ಮಾಡುವುದು ಬಹಳ ಮುಖ್ಯ ಎಂದು ನನಗೆ ಅನಿಸುತ್ತದೆ. ನಾವು ಬಾಹ್ಯಾಕಾಶದಿಂದ ಮಾಡಬಹುದಾದರೆ, ನೆಲದ ಮೇಲಿರುವ ಜನರೂ ಸಹ ಮಾಡಬಹುದು ಎಂದು ನನಗೆ ಅನಿಸುತ್ತದೆ” ಎಂದಿದ್ದಾರೆ.
ಇದೇ ರೀತಿಯ ವಿದ್ಯಮಾನವೊಂದರಲ್ಲಿ, 2016ರ ಅಧ್ಯಕ್ಷೀಯ ಚುನಾವಣೆ ವೇಳೆ ನಾಸಾದ ಮತ್ತೊಬ್ಬ ಗಗನಯಾತ್ರಿ ಶೇನ್ ಕಿಮ್‌ಬರೋ, ಭೂ ಮೇಲ್ಮೈನಿಂದ 259 ಕಿಮೀ ಎತ್ತರದಲ್ಲಿರುವ ಬಾಹ್ಯಾಕಾಶ ಕೇಂದ್ರದಿಂದ ಮತದಾನ ಮಾಡಿದ್ದರು. 1997ರಿಂದಲೂ ಸಹ ಬಾಹ್ಯಾಕಾಶದಿಂದಲೇ ಮತದಾನ ಮಾಡುವ ಅವಕಾಶವನ್ನು ಗಗನಯಾತ್ರಿಗಳಿಗೆ ಕೊಡಲಾಗಿದೆ.
ಇಲ್ಲಿನ ಹ್ಯಾರಿಸ್ ಕೌಂಟಿ ಗುಮಾಸ್ತನ ಕಾರ್ಯಾಲಯದಿಂದ ಎಲೆಕ್ಟ್ರಾನಿಕ್ ಬ್ಯಾಲೆಟ್ ಅನ್ನು ಬಹಳ ಸೆಕ್ಯೂರ್ ಆಗಿ ಅಪ್‌ಲೋಡ್ ಮಾಡಿ, ನಾಸಾದ ಜಾನ್ಸನ್ ಬಾಹ್ಯಾಕಾಶ ಯೋಜನಾ ನಿಯಂತ್ರಣ ಕೇಂದ್ರಕ್ಕೆ. ತಮಗೆ ಸಿಕ್ಕ ನಿರ್ದಿಷ್ಟ ಕ್ರೆಡೆನ್ಷಿಯಲ್‌ಗಳನ್ನು ಬಳಸಿಕೊಂಡು, ನಾಸಾ ಗಗನಯಾತ್ರಿಗಳು ಮತದಾನ ಮಾಡಲಿದ್ದು, ಅದನ್ನು ಕೌಂಟಿ ಗುಮಾಸ್ತನ ಕಾರ್ಯಾಲಯಕ್ಕೆ ಇ-ಮೇಲ್ ಮುಖಾಂತರ ಕಳುಹಿಸಲಾಗುವುದು.