ಹುಲಿ ಹಾಡುತ್ತಿರೋದನ್ನ ಎಲ್ಲಿಯಾದರೂ ಕೇಳಿದ್ದೀರಾ..? ಕೇಳಿಲ್ಲ ಅಂತಾದ್ರೆ ನೀವೊಮ್ಮೆ ಸೈಬೀರಿಯನ್ ನಗರವಾದ ಬರ್ನಾಲ್ ಗೆ ಭೇಟಿ ನೀಡಲೇಬೇಕು. ಯಾಕಂದ್ರೆ ಇಲ್ಲಿರುವ 8 ತಿಂಗಳ ಹುಲಿ ಮರಿ ನಿಮಗಾಗಿ ಸಂಗೀತ ಸುಧೆಯನ್ನೇ ಹರಿಸಲಿದೆ. ಪ್ರಾಣಿ ಸಂಗ್ರಹಾಲಯದಲ್ಲಿರುವ ವಿಟಾಸ್ ಹೆಸರಿನ ಈ ಹುಲಿ ಸಂಗೀತದ ರೂಪದಲ್ಲಿ ಅಳುವ ಮೂಲಕ ಪ್ರವಾಸಿಗರನ್ನ ಆಕರ್ಷಿಸುತ್ತಿದೆ.
ಲೆಸನ್ಯಾ ಸ್ಕಜ್ಕಾ ಪ್ರಾಣಿ ಸಂಗ್ರಹಾಲಯದಲ್ಲಿ ಇತ್ತೀಚೆಗೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು ಸಖತ್ ವೈರಲ್ ಆಗಿದೆ. ಇದು ಒಂದು ರೀತಿ ಹಕ್ಕಿ ಹಾಗೂ ಕೋತಿ ಕೂಗಿದಂತೆ ಕೇಳುತ್ತಿದೆ. ಹುಲಿ ಈ ರೀತಿ ಅಳುತ್ತಿರೋದನ್ನ ಕಂಡ ಜನತೆ ಮರಿಗೇನಾದರೂ ಸಮಸ್ಯೆ ಇದೆಯೇ ಎಂದು ಕೇಳಿದ್ದಾರೆ. ಆದರೆ ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿ ಹುಲಿ ಆರೋಗ್ಯವಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.