ಕೊರೋನಾ ವೈರಸ್ ಸೋಂಕಿನ ಕಾರಣದಿಂದ ತರಗತಿಗಳು, ಕಚೇರಿಗಳೆಲ್ಲಾ ಸ್ಮಾರ್ಟ್‌ಫೋನ್, ಲ್ಯಾಪ್ಟಾಪ್‌ಗಳಲ್ಲಿ ಸೇರಿಕೊಂಡು ಬಿಟ್ಟಿವೆ. ಝೂಮ್, ಸ್ಕೈಪ್‌ನಂಥ ಪ್ಲಾಟ್‌ಫಾರಂಗಳಲ್ಲಿ ನಡೆಯುವ ಆನ್ಲೈನ್ ಮೀಟಿಂಗ್‌ಗಳು ಕೆಲವೊಮ್ಮ ಭಾರೀ ಹಾಸ್ಯದ ವಸ್ತುಗಳಾಗಿಬಿಡುತ್ತವೆ.
ಇಂಥ ಒಂದು ನಿದರ್ಶನದಲ್ಲಿ ಸಿಂಗಪುರದ ರಾಷ್ಟ್ರೀಯ ವಿವಿಯ ಗಣಿತ ಪ್ರಾಧ್ಯಾಪಕರೊಬ್ಬರು ಆನ್ಲೈನ್ ಮುಖಾಂತರ ತಮ್ಮ ವಿದ್ಯಾರ್ಥಿಗಳಿಗೆ ಎರಡು ಗಂಟೆಗಳ ಕಾಲ ಬೋಧನೆ ಮಾಡಿದ ಬಳಿಕ ತಾವು ಮಾಡಿದ ಸಣ್ಣದೊಂದು ತಪ್ಪು ಎಂಥದ್ದು ಎಂದು ಅರಿತುಕೊಂಡಿದ್ದಾರೆ.
ಬರೋಬ್ಬರಿ 15 ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಪ್ರಸಿದ್ಧ ಮಾಲ್ ಸೀಜ್....!
ಎನ್‌ಯುಎಸ್‌ನ ಪ್ರಾಧ್ಯಾಪಕ ವಾಂಗ್ ಅವರು ತಮ್ಮ ಬೋಧನೆಯನ್ನು ಇನ್ನೇನು ಮುಕ್ತಾಯಗೊಳಿಸಬೇಕು ಅನ್ನುವಷ್ಟರಲ್ಲಿ, ಅವರ ವಿದ್ಯಾರ್ಥಿಯೊಬ್ಬರಿಂದ ತಾವು ಕಳೆದ ಎರಡು ಗಂಟೆಗಳ ಅವಧಿಯಿಂದ ಮ್ಯೂಟ್‌ನಲ್ಲಿರುವ ವಿಷಯ ತಿಳಿದುಕೊಂಡಿದ್ದಾರೆ.
“6:08 ಗಂಟೆಯಿಂದಲೂ ನಮಗೆ ನಿಮ್ಮ ಯಾವುದೇ ದನಿ ಕೇಳಲು ಆಗುತ್ತಿಲ್ಲ” ಎಂದು ವಿದ್ಯಾರ್ಥಿಯೊಬ್ಬರು ಪ್ರಾಧ್ಯಾಪಕರಿಗೆ ಹೇಳುತ್ತಿರುವುನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋದಲ್ಲಿ ಕೇಳಿಸಿಕೊಳ್ಳಬಹುದಾಗಿದೆ. ಆಗ ಗಡಿಯಾರದತ್ತ ಕಣ್ಣು ಹಾಯಿಸಿದ ವಾಂಗ್, ತಾವು ಈ ಅವಧಿಯಲ್ಲಿ ಎರಡು ಅಮೂಲ್ಯ ಗಂಟೆಗಳನ್ನು ಹಾಳು ಮಾಡಿಕೊಂಡಿರುವುದನ್ನು ಅರಿತು ಕೊಂಡಿದ್ದಾರೆ.