ಸವಾಲಿನ ಸಂದರ್ಭಗಳಲ್ಲಿ ಬೆನ್ನಿಗೆ ನಿಲ್ಲುವ ನಮ್ಮ ಕುಟುಂಬಗಳು ನಮ್ಮ ವೈಯಕ್ತಿಕ ವ್ಯಕ್ತಿತ್ವವನ್ನೂ ರೂಪಿಸುತ್ತವೆ. ಪರಿಸ್ಥಿತಿ ಏನೇ ಇದ್ದರೂ ಮುಂದೆ ಸಾಗಲು ನೆರವಾಗುವುದೇ ಕೌಟುಂಬಿಕ ಬೆಂಬಲ.
ಕೆಲವೊಮ್ಮೆ ನಾವು ದೂರದ ಊರುಗಳಲ್ಲಿ ಕೆಲಸ ಮಾಡುವಾಗ ನಮ್ಮ ಕುಟುಂಬದ ಸದಸ್ಯರ ಫೋಟೋಗಳನ್ನು ನೋಡುವುದು ಅಥವಾ ಅವರೊಂದಿಗೆ ವಿಡಿಯೋ ಕಾಲ್ ಮಾಡುವ ಮೂಲಕ ನಾವು ನೈತಿಕ ಸ್ಥೈರ್ಯ ತುಂಬಿಕೊಳ್ಳಲು ನೋಡುತ್ತೇವೆ.
ಜೀವ ತೆಗೆದ ಅಕ್ರಮ ಸಂಬಂಧ: ಮಾರಕಾಸ್ತ್ರದಿಂದ ಕೊಚ್ಚಿ ರೌಡಿಶೀಟರ್ ಹತ್ಯೆ
ಸಿಂಗಪುರದ ಡೆಲಿವರಿ ಚಾಲಕರೊಬ್ಬರ ಮೋಟರ್‌ಬೈಕ್‌ನಲ್ಲಿ ಫೋಟೋ ಕೊಲಾಜ್ ಇರುವ ಚಿತ್ರವೊಂದು ವೈರಲ್ ಆಗಿದೆ. ಆ ಕೊಲಾಜ್‌ನಲ್ಲಿ ಈತನ ಕುಟುಂಬದ ಸದಸ್ಯರ ಚಿತ್ರಗಳು ಇವೆ. ಆತನ ಹೆಲ್ಮೆಟ್ ಮೇಲೂ ಪುಟಾಣಿ ಚಿತ್ರಗಳು ಇದ್ದು, ’ಡ್ಯಾಡ್ಸ್ ಫಾರ್ ಲೈಫ್’ ಎಂದು ಬರೆಯಲಾಗಿದೆ.
ಈ ಫೋಟೋ ಹಾಗೂ ಸ್ಟಿಕರ್‌ಗಳ ಮೂಲಕ ಈತನಿಗೆ ತಾನು ಯಾರಿಗಾಗಿ ಕೆಲಸ ಮಾಡುತ್ತಿದ್ದೇನೆ ಎಂಬ ಅರಿವು ಸದಾ ಇರುತ್ತಂತೆ ಹಾಗೂ ಅದಕ್ಕಾಗಿ ಆತ ಇನ್ನಷ್ಟು ಪರಿಶ್ರಮ ಹಾಕಲು ಸ್ಪೂರ್ತಿ ಸಿಗುತ್ತಂತೆ.