
ಅಂದಹಾಗೆ ಈ ಪ್ರಾಣಿ ಬಗ್ಗೆ ಈಗ್ಯಾಕೆ ವಿಚಾರ ಬಂತು ಅನ್ಕೊಂಡ್ರಾ..? ಅಸಲಿಗೆ ಈ ಸೋಂಬೇರಿ ಪ್ರಾಣಿ ಬ್ರೆಜಿಲ್ ಸಿಟಿ ಬಸ್ನಲ್ಲಿ ಉಲ್ಟಾ ನೇತು ಹಾಕಿಕೊಂಡು ಜನರ ಜೊತೆ ಪ್ರಯಾಣ ಮಾಡಿದೆ.
ಸಿಕ್ಕಾಪಟ್ಟೆ ನಿಧಾನವಾಗಿ ಚಲಿಸುವ ಈ ಪ್ರಾಣಿ ಬಸ್ ಹತ್ತುವ ಮೂಲಕ ಬಹುಶಃ ಇದೇ ಮೊದಲ ಬಾರಿಗೆ ಇಷ್ಟೊಂದು ವೇಗವಾಗಿ ಚಲಿಸುವ ಅನುಭವ ಪಡೆದಿರಬಹುದು. ಈ ಅಪರೂಪದ ಪ್ರಯಾಣಿಕನನ್ನ ಬಸ್ ಚಾಲಕ ರಕ್ಷಣೆ ಮಾಡಿದ್ದಾರೆ.
ನಾನು ಬಸ್ನ್ನ ನಿಲ್ದಾಣದಲ್ಲಿ ನಿಲ್ಲಿಸಿದ್ದೆ. ಈ ವೇಳೆ ಯಾವುದೋ ಒಂದು ಪ್ರಾಣಿ ಬಹಳ ನಿಧಾನವಾಗಿ ಚಲಿಸುತ್ತಿರೋದನ್ನ ನೋಡಿದೆ. ನನಗೆ ಅದು ಸ್ಲೋತ್ ಅನ್ನೋದು ತಿಳಿಯಿತು. ಕಾರಿನ ಬಳಿ ಹೋಗುತ್ತಿದ್ದ ಈ ಪ್ರಾಣಿಯನ್ನ ರಕ್ಷಿಸಿದೆವು. ಆದರೆ ಅದನ್ನ ಅಲ್ಲೇ ದಾರಿ ಮಧ್ಯೆ ಬಿಟ್ಟು ಬರಲು ಮನಸ್ಸಾಗಲಿಲ್ಲ. ವಾಹನ ಅಪಘಾತವಾಗಬಹುದೆಂದು ನನಗೆ ಹಾಗೂ ನಿರ್ವಾಹಕನಿಗೆ ಎನಿಸಿತು. ಹೀಗಾಗಿ ಅದನ್ನ ಬಸ್ನಲ್ಲಿ ಕೂರಿಸಿಕೊಂಡೆವು ಎಂದು ಚಾಲಕ ಹೇಳಿದ್ರು.ಈ ಪ್ರಾಣಿಯನ್ನ ಹತ್ತಿರದ ಪೊಲೀಸ್ ಠಾಣೆಗೆ ಚಾಲಕ – ನಿರ್ವಾಹಕ ಒಪ್ಪಿಸಿದ್ದಾರೆ.