
ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುವಾಗ ಬಹಳಷ್ಟು ಸೋಜಿಗದ ಕ್ಷಣಗಳನ್ನು ಎದುರಿಸಿದ ಘಟನೆಗಳು ಬಹಳಷ್ಟು ಮಂದಿಯ ಅನುಭವದಲ್ಲಿ ದಾಖಲಾಗಿವೆ. ಇವುಗಳ ಪಟ್ಟಿಗೆ ಇಲ್ಲೊಂದು ಹೊಸ ಘಟನೆ ಸೇರಿಕೊಂಡಿದೆ.
ಟಿಕ್‌ಟಾಕ್‌ನಲ್ಲಿ ಸೆನ್ಸೇಷನ್ ಆಗಿರುವ ಬ್ರೂಕ್ ಅವೆರಿಕ್ ವಿಡಿಯೋ ಶೇರಿಂಗ್ ತಾಣದಲ್ಲಿ ತಮ್ಮದೊಂದು ಹೊಸ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಜನಪ್ರಿಯ ಡೇಟಿಂಗ್ ಅಪ್ಲಿಕೇಶನ್ ’ಹಿಂಜ್’ನಲ್ಲಿ, ನವೆಂಬರ್ 26ರ ಥ್ಯಾಂಕ್ಸ್ ಗಿವಿಂಗ್ ದಿನದಂದು ನಡೆದ ಘಟನೆಯೊಂದನ್ನು ಲೇಡಿಎಫ್ರಾನ್ ಹೆಸರಿನ ಈಕೆ ಹಂಚಿಕೊಂಡಿದ್ದಾರೆ.
“ಬಹಳ ಹೊಂದಿಕೆಯಾಗುತ್ತೀರಿ: ಬ್ರೂಕ್ & ನೋವಾ, ನೀವಿಬ್ಬರೂ ಮೀಟ್ ಮಾಡಬೇಕು” ಎಂದು ಹಿಂಜ್ ಕಿರುತಂತ್ರಾಂಶ ಇಬ್ಬರಿಗೂ ಸೂಚಿಸಿದೆ. ಆದರೆ ಈ ಇಬ್ಬರೂ ವಾಸ್ತವದಲ್ಲಿ ಒಡಹುಟ್ಟಿದರವಾಗಿದ್ದಾರೆ! ಈ ನಗೆಪಾಟಲಿನ ಘಟನೆಗೆ ಟಿಕ್‌ಟಾಕ್‌ನಲ್ಲಿ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ತಾಗಿ ವೈರಲ್ ಆಗಿದೆ.
