ಪಾರ್ಕಿಂಗ್ ಲಾಟ್ ನಲ್ಲಿ ಕಾರಿನ ಒಳಗೆ ಬಂಧಿಯಾಗಿ ಬಿಸಿಲಿನ ಶಾಖದಿಂದ ನರಳಿ ಜೀವ ಉಳಿಸಿಕೊಳ್ಳಲು ಬೊಬ್ಬಿಡುತ್ತಿದ್ದ ನಾಯಿಯನ್ನು ದಾರಿಹೋಕರು ರಕ್ಷಿಸಿದ್ದಾರೆ.
ಸೌತ್ ವೇಲ್ಸ್ ನಲ್ಲಿಈ ಘಟನೆ ನಡೆದಿದ್ದು, ರಕ್ಷಣಾ ಕಾರ್ಯಾಚರಣೆ ವಿಡಿಯೋ ವೈರಲ್ ಆಗಿದೆ.
ಕಾರಿನೊಳಗೆ ನಾಯಿಯು ಬಿಸಿಲಿನ ಶಾಖದಿಂದ ಬಳಲಿ ಪರದಾಡುತ್ತಿದ್ದುದನ್ನು ನೋಡಿದ ವ್ಯಕ್ತಿಯೊಬ್ಬರು, ಕಾರಿನ ಮಾಲಿಕರನ್ನು ಸ್ಥಳಕ್ಕೆ ಕರೆಸಲು ಪ್ರಯತ್ನಿಸಿದರು. ಅರ್ಧ ಗಂಟೆಯಾದರೂ ಮಾಲಿಕರು ಬಾರದೇ ಇದ್ದಾಗ ಕೊನೆಗೆ ತಾವೇ ಕಾರಿನ ಹಿಂಬದಿಯ ಕಿಟಕಿಯ ಗಾಜನ್ನು ಒಡೆದು ಒಳನುಗ್ಗಿ, ಮುಂಬಾಗಿಲನ್ನು ಅನ್ ಲಾಕ್ ಮಾಡಿ ನಾಯಿ ಹೊರಗೆ ಬಿಟ್ಟರು.
ಜತೆಗೆ ನೀರು ಕುಡಿಸಿ ನಾಯಿಯನ್ನು ಸಂತೈಸಿದರು. ಹಾಗೆಯೇ ಪೊಲೀಸರ ಗಮನಕ್ಕೂ ತಂದಿದ್ದಾರೆ.
https://www.youtube.com/watch?time_continue=1&v=Vq_DLTNJJyk&feature=emb_logo