alex Certify SHOKING: ಮುಖದಲ್ಲಿನ ಮೊಡವೆ ನಿವಾರಿಸುತ್ತಂತೆ ನಾಯಿ ಮೂತ್ರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOKING: ಮುಖದಲ್ಲಿನ ಮೊಡವೆ ನಿವಾರಿಸುತ್ತಂತೆ ನಾಯಿ ಮೂತ್ರ…!

ನ್ಯೂಯಾರ್ಕ್: ಇತ್ತೀಚಿನ ದಿನಗಳಲ್ಲಿ ಸೌಂದರ್ಯ ವೃದ್ಧಿಗಾಗಿ ಮಹಿಳೆಯರು-ಪುರುಷರು ಅನುಸರಿಸದ ಮಾರ್ಗವಿಲ್ಲ. ಅದರಲ್ಲೂ ಮುಖದ ಕಾಂತಿ ಹೆಚ್ಚಿಸಲು ಹಲವಾರು ರೀತಿಯ ಕ್ರೀಮ್, ಫೇಷಿಯಲ್, ಮಸಾಜ್, ಮನೆ ಮದ್ದು ಹೀಗೆ ವಿವಿಧ ಟಿಪ್ಸ್ ಗಳನ್ನು ಅನುಸರಿಸುತ್ತಾರೆ. ಆದರೆ ಯಾರಾದರೂ ನಾಯಿ ಮೂತ್ರ ಸೇವಿಸಿ ಮುಖದ ಕಾಂತಿ ಹೆಚ್ಚಿಸಿಕೊಳ್ಳುವ ಬಗೆ ಕೇಳಿದ್ದೀರಾ…? ಅಚ್ಚರಿ ಎನಿಸಿದರೂ ಇದು ನಿಜ. ಇಲ್ಲೋರ್ವ ಮಹಿಳಾಮಣಿ ಮುಖದ ಕಾಂತಿಗಾಗಿ ಪ್ರತಿದಿನ ನಾಯಿ ಮೂತ್ರ ಸೇವಿಸುತ್ತಿದ್ದಾರೆ.

ಲೀನಾ ಎಂಬ ಯು.ಎಸ್. ಮೂಲದ ಮಹಿಳೆ ತನ್ನ ಮುಖದಲ್ಲಿನ ಮೊಡವೆ ಸಮಸ್ಯೆಗಳ ನಿವಾರಣೆಗಾಗಿ ನಾಯಿ ಮೂತ್ರವನ್ನು ಸೇವಿಸುತ್ತಾರಂತೆ. ನಾಯಿ ಮೂತ್ರದಲ್ಲಿ ವಿಟಮಿನ್ ಎ, ವಿಟಮಿನ್ ಇ ಮತ್ತು ಕ್ಯಾಲ್ಸಿಯಂ ಗುಣಗಳಿವೆ. ಪ್ರತಿದಿನ ನಾಯಿ ಮೂತ್ರ ಸೇವಿಸಿದ್ದರಿಂದ ಒಂದೇ ವಾರದಲ್ಲಿ ನನ್ನ ಮುಖದಲ್ಲಿರುವ ಮೊಡವೆ ಕಡಿಮೆಯಾಯಿತು ಅಲ್ಲದೇ ಕಲೆಗಳು ಮಾಯವಾಗಿ ತ್ವಚೆಯ ಕಾಂತಿ ಹೆಚ್ಚಿತು ಎಂದು ಲೀನಾ ತಿಳಿಸಿದ್ದಾರೆ.

ನಾಯಿ ಮೂತ್ರದಿಂದ ಕ್ಯಾನ್ಸರ್ ನಂತಹ ಸಮಸ್ಯೆಯನ್ನು ಕೂಡ ತಡೆಗಟ್ಟಬಹುದು. ಹಾಗಾಗಿ ನಾಯಿ ಮೂತ್ರ ಹಲವು ರೋಗಗಳಿಗೆ ಔಷಧ ಎಂದು ಲೀನಾ ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...